ಮೂರನೇ ಮದುವೆಯಾದ ಬಾವನ ಕೊಂದ ಬಾಮೈದ

ಸೋಮವಾರ, 4 ಏಪ್ರಿಲ್ 2022 (10:00 IST)
ರಾಂಚಿ: ಮೂರನೇ ಮದುವೆಯಾಗಲು ಹೊರಟ ಬಾವನನ್ನು ಬಾಮೈದನೇ ಕೊಲೆ ಮಾಡಿದ ಘಟನೆ ನಡೆದಿದೆ.

ಈ ಸಂಬಂಧ ಸ್ವಯಂ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಾವಿಯೊಂದರಲ್ಲಿ ಮೃತದೇಹದ ಅವಶೇಷಗಳು ಪತ್ತೆಯಾಗಿತ್ತು.

ಪೊಲೀಸರು ಸ್ಥಳೀಯರ ಹೇಳಿಕೆ ಆಧಾರದಿಂದ ತನಿಖೆ ನಡೆಸಿದಾಗ ಸತ್ಯ ಬಯಲಾಗಿದೆ. ಕೊಲೆಗೆ ಬಾಮೈದನ ಜೊತೆ ಇನ್ನೂ ಮೂವರು ಸಹಕರಿಸಿದ್ದರು. ಎಲ್ಲಾ ಆರೋಪಿಗಳನ್ನು ಇದೀಗ ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ