ಪ್ರೀತಿಸಿ ಮದುವೆಯಾದ ತಪ್ಪಿಗೆ ಯುವಕನ ರುಂಡ ಕತ್ತರಿಸಿದ ಬಾವ!
25 ವರ್ಷದ ಯುವಕ ಕೊಲೆಗೀಡಾದ ದುರ್ದೈವಿ. ಈತ ಆರೋಪಿಯ ಸಹೋದರಿಯನ್ನು ಮನೆಯವರ ಒಪ್ಪಿಗೆಯಿಲ್ಲದೇ ಪ್ರೀತಿಸಿ ಮದುವೆಯಾಗಿದ್ದ.
ಈ ಬಗ್ಗೆ ಯುವತಿಯ ಮನೆಯವರು ಪದೇ ಪದೇ ಯುವ ಜೋಡಿಗೆ ಬೆದರಿಕೆ ಹಾಕುತ್ತಲೇ ಇದ್ದರು. ಕೊನೆಗೆ ದಂಪತಿ ಮನೆಗೇ ನುಗ್ಗಿದ ಯುವತಿ ಮನೆಯವರು ಕೊಲೆ ಮಾಡಿದ್ದಲ್ಲದೆ, ಯುವತಿಯ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೆಲವರನ್ನು ವಶಕ್ಕೆ ಪಡೆದಿದ್ದಾರೆ.