ಪಲ್ಲಂಗದಲ್ಲಿದ್ದವಳ ಕಾಟ ತಡೆಯಲಾಗದೇ ಪ್ರಿಯಕರ ಮಾಡಿದ್ದೇನು?

ಭಾನುವಾರ, 26 ಜೂನ್ 2022 (08:40 IST)
ನವದೆಹಲಿ: ಅನೈತಿಕ ಸಂಬಂಧ ಅನೇಕ ಅಪರಾಧಗಳಿಗೆ ಎಡೆಮಾಡಿಕೊಡುವುದು ಇದೇ ಮೊದಲಲ್ಲ. ಇದೀಗ ಅಂತಹದ್ದೇ ಒಂದು ಘಟನೆ ನಡೆದಿದೆ.

ಉತ್ತರ ಪ್ರದೇಶದ ಮಹಿಳೆಯೊಬ್ಬಳ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ದೆಹಲಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದಾಗ ಉತ್ತರ ಪ್ರದೇಶದವನೇ ಆದ ಆಕೆಯ ಪ್ರಿಯಕರನೇ ಈ ಕೃತ್ಯವೆಸಗಿರುವುದು ತಿಳಿದುಬಂದಿದೆ.

ಮಹಿಳೆಯೊಂದಿಗೆ ಕಳೆದ ಎರಡು ವರ್ಷಗಳಿಂದ ಆರೋಪಿ ಅನೈತಿಕ ಸಂಬಂಧ ಹೊಂದಿದ್ದ. ಆದರೆ ಇತ್ತೀಚೆಗೆ ಆಕೆ ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಿದ್ದಳು. ಇದರಿಂದ ಕಿರಿ ಕಿರಿಗೊಳಗಾಗಿದ್ದ ಆರೋಪಿ ಸಹೋದರಿ ಮದುವೆಗೆಂದು ಆಕೆ ದೆಹಲಿಗೆ ಹೋಗಿದ್ದಾಗ ಹಿಂಬಾಲಿಸಿ ಕೊಲೆ ಮಾಡಿದ್ದ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ