ಹೇಗಿದ್ರೂ ಮದುವೆ ಆಗ್ತೀನಲ್ವಾ ಎಂದು ರೇಪ್ ಮಾಡಿದ!
ಹೇಗಿದ್ದರೂ ಮುಂದೆ ಮದುವೆಯಾಗುತ್ತೀವಿ ಎಂದು ನಂಬಿದ್ದ ಯುವತಿ ಆತನಿಗೆ ದೇಹವೊಪ್ಪಿಸಿದ್ದಳು. ಆದರೆ ಆತ ತನ್ನ ಕಾಮತೃಷೆ ತೀರಿಸಿಕೊಳ್ಳಲು ಆಕೆಯನ್ನು ನಂಬಿ ವಂಚಿಸಿದ್ದ.
ಆಕೆಯ ಜೊತೆ ಬಾಡಿಗೆ ಮನೆ ಪಡೆದು ಲಿವಿಂಗ್ ಟುಗೆದರ್ ಸಂಬಂಧ ನಡೆಸಿದ್ದ. ಆದರೆ ಮೂರು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಿದ್ದ. ಆತನನ್ನು ಪತ್ತೆ ಮಾಡಿ ಮದುವೆ ವಿಚಾರ ಕೇಳಿದಾಗ ಕೈ ಎತ್ತಿದ್ದ. ಹೀಗಾಗಿ ಯುವತಿ ಪೊಲೀಸರಿಗೆ ದೂರು ನೀಡಬೇಕಾಯಿತು.