ಕಿಡ್ನ್ಯಾಪ್ ನಾಟಕವಾಡಿ ತಂದೆಯಿಂದಲೇ ಹಣ ಪೀಕಲು ಹೊರಟ ಮಗ

ಗುರುವಾರ, 20 ಜನವರಿ 2022 (09:45 IST)
ಚೆನ್ನೈ: ನಾನು ಅಪಹರಣವಾಗಿದ್ದೇನೆ, ನನ್ನನ್ನು ಬಿಡಿಸಲು 30 ಲಕ್ಷ ರೂ. ಹಣ ನೀಡುವಂತೆ ತಂದೆ ಬಳಿ ನಾಟಕವಾಡಿ ಮಗ ಸಿಕ್ಕಿಬಿದ್ದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

24 ವರ್ಷದ ಮಗ ಕಿಡ್ನ್ಯಾಪ್ ನಾಟಕವಾಡಿದ್ದಾನೆ. ತಂದೆಗೆ ಮೆಸೇಜ್ ಕಳುಹಿಸಿ 30 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದಾನೆ. ಆದರೆ ಉದ್ಯಮಿಯಾಗಿರುವ ತಂದೆ ಪೊಲೀಸರಿಗೆ ದೂರು ನೀಡಿದ್ದು, ಮೊಬೈಲ್ ಲೊಕೇಷನ್ ಮೂಲಕ ಮಗನನ್ನು ಪತ್ತೆ ಹಚ್ಚಿದ್ದಾರೆ.

ಈ ವೇಳೆ ಮಗನ ನಾಟಕ ಬಯಲಾಗಿದ್ದು, ಕಿರು ಚಿತ್ರ ನಿರ್ಮಿಸುವ ಆಸೆಯಿಂದ ಕಿಡ್ನ್ಯಾಪ್ ನಾಟಕವಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ತಂದೆಯ ಮನವಿ ಮೇರೆಗೆ ಮಗನನ್ನು ಎಚ್ಚರಿಕೆ ನೀಡಿ ಪೊಲೀಸರು ಬಿಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ