ವೃತ್ತಿಯಲ್ಲಿ ಆಟೋ ಚಾಲಕನಾಗಿರುವ 52 ವರ್ಷ ವ್ಯಕ್ತಿ ಆರೋಪಿ. ಈತನ ಪುತ್ರ ಯುವತಿಯೊಬ್ಬಳೊಂದಿಗೆ ಲಿವಿಂಗ್ ಟುಗೆದರ್ ಸಂಬಂಧ ಹೊಂದಿದ್ದ. ಆಕೆಯ ಸಹವಾಸ ಬಿಡು ಎಂದು ಪುತ್ರನಿಗೆ ಹೇಳುತ್ತಲೇ ಇದ್ದ. ಆದರೆ ಆತ ಒಪ್ಪಿರಲಿಲ್ಲ. ಈ ಸಂಬಂಧ ಯುವತಿಗೂ ಬೆದರಿಕೆ ಹಾಕಿದ್ದ. ಯಾವುದಕ್ಕೂ ಜಗ್ಗದೇ ಹೋದಾಗ ಪುತ್ರನ ಬೈಕ್ ಜತೆಗೆ ಅದರ ಪಕ್ಕದಲ್ಲೇ ಪಾರ್ಕ್ ಮಾಡಲಾಗಿದ್ದ ಏಳು ಬೈಕ್ ಗಳನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.