ಮಾಟ ಮಂತ್ರ ಮಾಡಿದ್ದೀಯಾ ಎಂದು ಅಜ್ಜಿಗೆ ಮೊಮ್ಮಗ ಮಾಡಿದ್ದೇನು ಗೊತ್ತಾ?
ವಸಂತ್ ಗುತ್ತೆ ಎಂಬಾತ ತನ್ನ ಅಜ್ಜಿ ಸಾಕು ಗುತ್ತೆ (55) ಮನೆಗೆ ತೆರಳಿ ಈ ಕೃತ್ಯವೆಸಗಿದ್ದಾನೆ. ಮಾಟ ಮಂತ್ರ ಮಾಡಿದ್ದೀಯಾ ಎಂದು ಅಜ್ಜಿಯನ್ನು ಪ್ರಶ್ನಿಸಿದ ಮೊಮ್ಮಗ ವಸಂತ್ ಆಕೆ ನಿರಾಕರಿಸಿದಾಗ ತಲೆಗೆ ಚಾಕುವಿನಿಂದ ತಿವಿದಿದ್ದಾನೆ.
ಇವರ ಗಲಾಟೆಯನ್ನು ತಡೆಯಲು ಬಂದ ಅಜ್ಜಿಯ ಸೊಸೆಯ ಮೇಲೂ ಆರೋಪಿ ವಸಂತ್ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಇದೀಗ ಪೊಲೀಸರು ಆರೋಪಿ ವಸಂತ್ ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.