ನೋಡ ನೋಡುತ್ತಿದ್ದಂತೆ ಕಲ್ಯಾಣಿಯಲ್ಲಿ ಮುಳುಗಿದ ವ್ಯಕ್ತಿ.. ಸಹಾಯಕ್ಕೆ ಬರದೇ ವಿಡಿಯೋ ತೆಗೆಯುತ್ತಿದ್ದ ಜನ
ಯಾವುದೇ ಅಪಘಾತದ ಸಂದರ್ಭದಲ್ಲಿ ಕಷ್ಟದಲ್ಲಿರುವವರಿಗೆ ನೆರವು ನೀಡಬೇಕೆಂದು ಎಷ್ಟೇ ಜಾಗೃತಿ ಮೂಡಿಸಿದರೂ ಜನ ಮಾತ್ರ ಆ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇತ್ತೀಚೆಗೆ ಚಿತ್ರದುರ್ಗದಲ್ಲಿ ಅಪಘಾತ ನಡೆದು ಗಾಯಾಳುಗಳು ನರಳುತ್ತಿದ್ದರೂ ಜನ ನೆರವಿಗೆ ಬಂದಿರಲಿಲ್ಲ. ನೆರವು ನೀಡುವ ಬದಲು ವಿಡಿಯೋ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ಇಂಥದ್ದೇ ಒಂದು ಘಟನೆ ಕೋಲಾರದಲ್ಲಿ ನಡೆದಿದೆ.
ಸಹಾಯಕ್ಕಾಗಿ ಈ ವ್ಯಕ್ತಿ ಎಷ್ಟೇ ಕೈಚಾಚಿದರೂ ಸಮೀಪವಿದ್ದ ಜನ ನೆರವಿಗೆ ಬರಲಿಲ್ಲ. ಅದರ ಬದಲು ಮೊಬೈಲ್`ಗಳಲ್ಲಿ ವಿಡಿಯೋ ತೆಗೆಯುತ್ತಿದ್ದರು. ಪಾಪ ಬಡ ಜೀಬ ನೀರಿನಲ್ಲೆ ಪ್ರಾಣ ಬಿಟ್ಟಿತು. ಅಗ್ನಿಶಾಮಕ ನೀರಿನಲ್ಲಿ ಶವಕ್ಕಾಗಿ ಹುಡುಕಾಟ ನಡೆಸಿದೆ.