ಹಣ ನೀಡಲು ನಿರಾಕರಣೆ: ಎರಡು ಬ್ಯಾಂಕ್‌ಗಳನ್ನೇ ಧ್ವಂಸಗೊಳಿಸಿದ ಗ್ರಾಹಕರು

ಸೋಮವಾರ, 28 ನವೆಂಬರ್ 2016 (17:19 IST)
ನಗದು ಹಣದ ಕೊರತೆಯಿರುವುದರಿಂದ ಗ್ರಾಹಕರಿಗೆ ತಲಾ 24 ಸಾವಿರ ರೂಪಾಯಿ ಹಣ ನೀಡಲು ಬ್ಯಾಂಕ್ ಅಧಿಕಾರಿಗಳು ತಿರಸ್ಕರಿಸಿದ್ದರಿಂದ, ಆಕ್ರೋಶಗೊಂಡ ಗ್ರಾಹಕರು ಎರಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ಗಳನ್ನು ಧ್ವಂಸಗೊಳಿಸಿದ ಘಟನೆ ವರದಿಯಾಗಿದೆ.
 
ಆಕ್ರೋಶಗೊಂಡ ಗ್ರಾಹಕರು ಹಿಂಸಾಚಾರದಲ್ಲಿ ತೊಡಗಿ ಬ್ಯಾಂಕ್‌ನೊಳಗೆ ನುಗ್ಗಿ ಧ್ವಂಸಗೊಳಿಸಿದ್ದಾರೆ. ಘಟನೆಯಲ್ಲಿ ಒಬ್ಬ ಪೊಲೀಸ್ ಪೇದೆಗೆ ಗಾಯಗಳಾಗಿವೆ. ಆದರೆ, ಇಲ್ಲಿಯವರೆಗೆ ಯಾರನ್ನು ಬಂಧಿಸಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ನೋಟು ನಿಷೇಧದ ನಂತರ ಒಬ್ಬ ವ್ಯಕ್ತಿ ವಾರಕ್ಕೆ ಗರಿಷ್ಠ 24 ಸಾವಿರ ಹಣ ಪಡೆಯಬಹುದು ಎನ್ನಲಾಗಿತ್ತು. ಅದರಂತೆ ಇಬ್ಬರು ಗ್ರಾಹಕರು 24 ಸಾವಿರ ರೂ ಹಣವನ್ನು ಪಡೆಯಲು ಮುಂದಾದಾಗ ಬ್ಯಾಂಕ್ ಅಧಿಕಾರಿಗಳು ಹಣದ ಕೊರತೆಯಿಂದಾಗಿ ನೀಡಲು ತಿರಸ್ಕರಿಸಿದಾಗ ಹಿಂಸಾಚಾರದ ಘಟನೆ ನಡೆದಿದೆ.
 
ಬ್ಯಾಂಕ್‌ನ ಹಿರಿಯ ಅಧಿಕಾರಿಗಳು 2000 ಕ್ಕಿಂತ ಹೆಚ್ಚಿನ ಹಣವನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದಾಗ ಆಕ್ರೋಶಗೊಂಡು ಗ್ರಾಹಕರು ಹಿಂಸಾಚಾರ ನಡೆಸಿದ್ದಾರೆ ಎಂದು ಬ್ಯಾಂಕ್ ವ್ಯವಸ್ಥಾಪಕ ಪ್ರಸಾದ್ ಜೈನ್ ತಿಳಿಸಿದ್ದಾರೆ.
 
ಬ್ಯಾಂಕ್ ಅಧಿಕಾರಿಗಳು 2000 ಕ್ಕಿಂತ ಹೆಚ್ಚಿನ ಹಣವನ್ನು ನೀಡಲು ನಿರಾಕರಿಸಿದ್ದರಿಂದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಗ್ರಾಹಕರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ