ನನ್ನ ರಾಜಕೀಯ ಜೀವನದಲ್ಲಿ ಮಣಿಪುರದಂಥ ಘೋರ ಅನುಭವ ಎಂದೂ ಆಗಿಲ್ಲ: ರಾಹುಲ್ ಗಾಂಧಿ

ಭಾನುವಾರ, 13 ಆಗಸ್ಟ್ 2023 (11:14 IST)
ತಿರುವನಂತಪುರಂ : ನನ್ನ 19 ವರ್ಷಗಳ ರಾಜಕೀಯ ಜೀವನದಲ್ಲಿ ಮಣಿಪುರದಂತಹ ಸಂಘರ್ಷದ ಅನುಭವವನ್ನು ನಾನು ಎಂದಿಗೂ ಅನುಭವಿಸಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ತವರು ಕ್ಷೇತ್ರವಾದ ವಯನಾಡಿಗೆ ಶನಿವಾರ ರಾಹುಲ್ ಗಾಂಧಿ ಭೇಟಿ ನೀಡಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಣಿಪುರ ಹಿಂಸಾಚಾರ ಕುರಿತು ಮಾತನಾಡಿ, ನಾನು ಸ್ವಲ್ಪ ದಿನಗಳ ಹಿಂದೆ ಮಣಿಪುರಕ್ಕೆ ಹೋಗಿದ್ದೆ. ನಾನು 19 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ.

ಮಣಿಪುರದಲ್ಲಿ ನಾನು ಅನುಭವಿಸಿದ ಅನುಭವವನ್ನು ರಾಜಕೀಯ ಜೀವನದಲ್ಲಿ ಎಂದಿಗೂ ಅನುಭವಿಸಿಲ್ಲ. ಬಿಜೆಪಿ ಕುಟುಂಬಗಳನ್ನು ನಾಶ ಮಾಡುವ ಗುರಿ ಹೊಂದಿದೆ. ಭಾರತವನ್ನು ವಿಭಜಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ನೀವು ಸಾವಿರಾರು ಕುಟುಂಬಗಳನ್ನು ನಾಶಪಡಿಸಿದ್ದೀರಿ. ನೀವು ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಅವಕಾಶ ನೀಡಿದ್ದೀರಿ. ನೀವು ಜನರ ಹತ್ಯೆಗೆ ಅವಕಾಶ ಮಾಡಿಕೊಟ್ಟಿದ್ದೀರಿ. ದೇಶದ ಪ್ರಧಾನಿಯಾಗಿ ನೀವು ನಗುತ್ತಿದ್ದೀರಾ ಎಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ವೈಖರಿ ವಿರುದ್ಧ ಮತ್ತೆ ರಾಹುಲ್ ಗಾಂಧಿ ಗುಡುಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ