ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತದ ಬಗ್ಗೆ ಕೇಂದ್ರದ ಮಹತ್ವದ ತೀರ್ಮಾನ

Krishnaveni K

ಶುಕ್ರವಾರ, 25 ಜುಲೈ 2025 (09:34 IST)
ನವದೆಹಲಿ: ಹಿಂಸಾಚಾರ ಪೀಡಿತವಾದ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಮುಂದುವರಿಸುವ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಘೋಷಿಸಿದೆ.

ಈ ಬಗ್ಗೆ ರಾಜ್ಯಸಭೆಯಲ್ಲಿ ಗೃಹಸಚಿವ ಅಮಿತ್ ಶಾ ಪ್ರಸ್ತಾವನೆ ಮಂಡಿಸಿದ್ದು ಸದನ ಅಂಗೀಕರಿಸಿದೆ. ಮಣಿಪುರದಲ್ಲಿ ಇನ್ನೂ 6 ತಿಂಗಳು ರಾಷ್ಟ್ರಪತಿ ಆಳ್ವಿಕೆ ಮುಂದುವರಿಯಲಿದೆ ಎಂದು ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.

ಸಂವಿಧಾನದ 356 ನೇ ವಿಧಿ ಅನ್ವಯ 2025 ರ ಫೆಬ್ರವರಿ 13 ರಂದು ರಾಷ್ಟ್ರಪತಿಗಳು ಮಾಡಿದ ಸುಗ್ರೀವಾಜ್ಞೆಯನ್ನು 2025 ಆಗಸ್ಟ್ 13 ರಿಂದ ಆರು ತಿಂಗಳ ಕಾಲ ಮುಂದುವರಿಸುವುದಾಗಿ ಗೃಹಸಚಿವರು ಮಂಡಿಸಿದ ಪ್ರಸ್ತಾವನೆಯನ್ನು ಸಂಸತ್ ಅಂಗೀಕರಿಸಿದೆ.

2023 ರಿಂದ ಮಣಿಪುರದಲ್ಲಿ ನಿರಂತರ ಹಿಂಸಾಚಾರ ನಡೆಯುತ್ತಲೇ ಇದೆ. ಆರಂಭದಲ್ಲಿ ಎರಡು ಬುಡಕಟ್ಟು ಸಮುದಾಯದ ನಡುವೆ ಆರಂಭವಾದ ಹಿಂಸಾಚಾರ ಭುಗಿಲೆದ್ದ ಪರಿಣಾಮ ಮುಖ್ಯಮಂತ್ರಿ ಬೀರೇನ್ ಸಿಂಗ್ ರಾಜೀನಾಮೆ ನೀಡಬೇಕಾಯಿತು. ಬಳಿಕ ಪರಿಸ್ಥಿತಿ ಕೈಮೀರಿ ಹೋದ ಹಿನ್ನಲೆಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ