ಜಿಎಸ್‌ಟಿ ಕಾನೂನು: ಸಚಿವ ಅರುಣ್ ಜೇಟ್ಲಿಯನ್ನು ಹೊಗಳಿದ ಮನೀಷ್ ಸಿಸೋಡಿಯಾ

ಸೋಮವಾರ, 24 ಅಕ್ಟೋಬರ್ 2016 (20:52 IST)
ರಾಜಕೀಯದಲ್ಲಿ ಶಾಶ್ವತ ಶತ್ರುಗಳಿಲ್ಲ ಅಥವಾ ಶಾಶ್ವತ ಮಿತ್ರರಿಲ್ಲ ಎನ್ನುವುದನ್ನು ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸಾಬೀತುಪಡಿಸಿದ್ದಾರೆ. ದೇಶದಲ್ಲಿ ತೆರಿಗೆ ಸುಧಾರಣೆಗಾಗಿ ಜಿಎಸ್‌ಟಿ ಮಸೂದೆಯನ್ನು ಜಾರಿಗೆ ತಂದ ಸಚಿವ ಅರುಣ್ ಜೇಟ್ಲಿಯವರನ್ನು ಅಭಿನಂದಿಸಿದ್ದಾರೆ.
 
ಜಿಎಸ್‌ಟಿ ಸಮಾವೇಶದಲ್ಲಿ ಮಾತನಾಡಿದ ಅವರು, ವರ್ತಕರಿಗೆ ಕಿರುಕುಳ ತಡೆಯಲು ಜಿಎಸ್‌ಟಿ ಮಸೂದೆ ನೆರವಾಗುವುದರಿಂದ ಆಪ್ ಸರಕಾರ ಮಸೂದೆಯನ್ನು ಬೆಂಬಲಿಸುತ್ತದೆ ಎಂದು ತಿಳಿಸಿದ್ದಾರೆ.
 
ಜಿಎಸ್‌ಟಿ ಕಾನೂನು ಜಾರಿಗೆ ತಂದಿದ್ದಕ್ಕಾಗಿ ಕೇಂದ್ರ ಸರಕಾರ ಮತ್ತು ಸಚಿವ ಜೇಟ್ಲಿಯವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಜಿಎಸ್‌ಟಿಯಿಂದ ದೇಶದ ಜನತೆಗೆ ತುಂಬಾ ಸಹಕಾರಿಯಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
 
ಸರ್ವಪಕ್ಷಗಳ ಸರ್ವಸಮ್ಮತ ಅಭಿಪ್ರಾಯ ಪಡೆದು ಜಾರಿಗೆ ತಂದ ಜಿಎಸ್‌ಟಿ ಕಾನೂನು ದೇಶದ ಆರ್ಥಿಕತೆ ಚೇತರಿಕೆಗೆ ಪೂರಕವಾಗಲಿದೆ. ಇಂತಹ ಕಾನೂನು ಜಾರಿಗೆ ತರುವಲ್ಲಿ ಶ್ರಮಿಸಿದ ಅರುಣ್ ಜೇಟ್ಲಿ ಅಭಿನಂದನಾರ್ಹರು ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ