ಉಗ್ರರನ್ನು ಹೇಗೆ ಸಾಯಿಸಬೇಕು ಅಂದ್ರೆ ನಮ್ಮ ಮುಖದಲ್ಲಿ ಬೆವರಿಳಿದ ಹಾಗೆ ಅವರಿಗೂ ಬೆವರು ಬರಬೇಕು: ಮಂಜುನಾಥ್ ಪತ್ನಿ
ಪತಿ ಮಂಜುನಾಥ್ ರನ್ನು ಕಣ್ಣೆದುರೇ ಉಗ್ರರು ಗುಂಡು ಹಾಕಿ ಸಾಯಿಸಿದ್ದಾರೆ. ಅವರಿಗೆ ಒಂದು ಕ್ಷಣವೂ ಅವಕಾಶ ಸಿಗಲಿಲ್ಲ. ನಮಗೆ ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಅವರ ಪ್ರಾಣವೇ ಹೋಗಿತ್ತು ಎಂದು ಪಲ್ಲವಿ ಕಣ್ಣೀರು ಹಾಕಿದ್ದಾರೆ.
ಪತಿಯ ಸಾವನ್ನು ಈಗಲೂ ಅವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಇದೆಲ್ಲಾ ಏನೋ ಒಂದು ಕನಸಿನಲ್ಲಿ ನಡೆಯುತ್ತಿದೆ ಎಂಬಂತಿದೆ. ಇಂದು ತಮ್ಮ ತವರು ಶಿವಮೊಗ್ಗಕ್ಕೆ ಮೃತದೇಹ ತಂದಾಗಲೂ ಅವರು ಮಾಧ್ಯಮಗಳ ಮುಂದೆ ತಮ್ಮ ನೋವು ತೋಡಿಕೊಂಡಿದ್ದಾರೆ.
ಉಗ್ರರಿಗೆ ಯಾವ ರೀತಿ ಶಿಕ್ಷೆ ಸಿಗಬೇಕು ಎಂದು ಆಶಿಸುತ್ತೀರಿ ಎಂದು ಕೇಳಿದಾಗ ನೋಡಿ ಈಗ ನಮ್ಮ ಹಣೆಯಲ್ಲಿ ಬೆವರು ಹರಿತಿದ್ಯಲ್ವಾ? ಅದೇ ರೀತಿ ಉಗ್ರರ ಹಣೆಯಲ್ಲೂ ಬೆವರಿಳಿಸಿ ಸಾಯಿಸಬೇಕು ಎಂದಿದ್ದಾರೆ.