6 ಮಂದಿಯ ಜೊತೆ ವಿವಾಹ : ಪತ್ನಿಯರಿಗೂ ಬಂದಿಲ್ಲ ಅನುಮಾನ ! ಮುಂದೇನಾಯ್ತು?
ಮಂಗಳವಾರ, 26 ಜುಲೈ 2022 (11:27 IST)
ಹೈದರಾಬಾದ್ : ಒಬ್ಬರಿಗೆ ತಿಳಿಯದೇ ಇನ್ನೊಬ್ಬಳನ್ನು ಮದುವೆಯಾಗುವುದು ಕೇವಲ ಸಿನಿಮಾದಲ್ಲಿ ಮಾತ್ರ ಸಾಧ್ಯ,
ನಿಜ ಜೀವನದಲ್ಲಿ ಇದು ಸಾಧ್ಯವೇ ಇಲ್ಲ ಎಂದು ತಿಳಿದುಕೊಂಡಿರುವವರೂ ಈ ಸುದ್ದಿಯನ್ನು ಓದಲೇ ಬೇಕು. ಇಲ್ಲೊಬ್ಬ ಅಸಾಮಿ ಒಂದಲ್ಲ, ಎರಡಲ್ಲ ಆರು ಮದುವೆಯಾಗಿದ್ದು, ಯಾರೊಬ್ಬರಿಗೂ ತಿಳಿಯದಂತೆ ಜೀವನ ನಡೆಸುತ್ತಿದ್ದ ಎಂಬುದನ್ನು ಹೈದರಾಬಾದ್ ಪೊಲೀಸರು ಕಂಡುಹಿಡಿದಿದ್ದಾರೆ.
ತನ್ನ ಹಣದೊಂದಿಗೆ ಪತಿ ಪರಾರಿಯಾಗಿದ್ದಾನೆ ಎಂದು ಹೈದರಾಬಾದ್ನ ಪೊಲೀಸರಿಗೆ ಮಹಿಳೆಯೊಬ್ಬಳು ದೂರು ಕೊಟ್ಟಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ಆತನ ಬಗ್ಗೆ ತನಿಖೆ ಮಾಡಲು ಪ್ರಾರಂಭ ಮಾಡಿದ್ದಾರೆ. ಈ ವೇಳೆ ಪೊಲೀಸರೇ ಆ ವ್ಯಕ್ತಿ ಬಗ್ಗೆ ತಿಳಿದುಕೊಂಡು ಆಶ್ಚರ್ಯಗೊಂಡಿದ್ದಾರೆ.
ಆಂಧ್ರಪ್ರದೇಶದ ಮಂಗಳಗಿರಿ ಮೂಲದ ವ್ಯಕ್ತಿ ಕೇವಲ ದೂರುದಾರರನ್ನು ಮಾತ್ರವಲ್ಲದೆ ಐದು ಮಹಿಳೆಯರನ್ನು ಮದುವೆಯಾಗಿದ್ದಾನೆ. ಆದರೆ ಈ ಬಗ್ಗೆ ಯಾವ ಮಹಿಳೆಗೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್ನ ಪೊಲೀಸರು ಗುರುವಾರ ಆರೋಪಿ ಅಡಪ ಶಿವ ಶಂಕರ ಬಾಬು(33)ನನ್ನು ವಿಶಾಖಪಟ್ಟಣಂನಿಂದ ಬಂಧಿಸಿ ನಂತರ ಹೈದರಾಬಾದ್ಗೆ ಕರೆತಂದಿದ್ದಾರೆ.
ಪ್ರಸ್ತುತ ಬಾಬು ವಿರುದ್ಧ ನಂಬಿಕೆ ದ್ರೋಹ ಮತ್ತು ವಂಚನೆ ಆರೋಪಗಳನ್ನು ಆಧಾರ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಬೇರೆ ವ್ಯಕ್ತಿಗಳು ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.