ಮಾಸ್ಕ್ ಇಲ್ಲಾಂದ್ರೆ ಒಂದು ಲಕ್ಷ ರೂ. ದಂಡ : ಬಿಜೆಪಿ ಹೇಳಿದ್ದೇನು?

ಶನಿವಾರ, 25 ಜುಲೈ 2020 (16:38 IST)
ಮಾಸ್ಕ್ ಧರಿಸದ ವ್ಯಕ್ತಿಗೆ ಒಂದು ಲಕ್ಷ ರೂಪಾಯಿ ದಂಡ ಹಾಕಬೇಕೆಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಜಾರ್ಖಂಡ್ ರಾಜ್ಯ ಸರಕಾರದ ಈ ಆದೇಶಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಸುದೇಶ್ ವರ್ಮಾ ಮಾತನಾಡಿದ್ದು, ಜಾರ್ಖಂಡ್ ಸರಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೊರೊನಾ ಕುರಿತು ಸಾಕಷ್ಟು ಜಾಗೃತಿ ಮೂಡಿಸಬೇಕಿದೆ. ಆ ಬಳಿಕ ದಂಡದ ಮೊತ್ತದ ಬಳಿಕ ನಿರ್ಧಾರ ಮಾಡಬೇಕು.

ಹಳ್ಳಿಗಳ ಜನರು ಒಂದು ಲಕ್ಷ ರೂ. ದಂಡ ಕೊಡೋದಕ್ಕೆ ಶಕ್ತರಾಗಿದ್ದಾರಾ ಅನ್ನೋದನ್ನು ಮೊದಲು ತಿಳಿದುಕೊಳ್ಳಬೇಕಿದೆ ಎಂದು ಬಿಜೆಪಿ ತಿರುಗೇಟು ನೀಡಿದ್ದು, ಲಕ್ಷ ರೂ. ದಂಡ ಹಾಕೋದನ್ನು ಕೂಡಲೇ ಬಿಡಬೇಕು ಎಂದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ