ಮಕ್ಕಳು ತಮ್ಮ ತಂದೆ-ತಾಯಿಗಳನ್ನು, ಹಿರಿಯರನ್ನು ಅನುಸರಿಸುವುದು ಸಾಮಾನ್ಯ. ಅವರಿಗೆ ಹೇಳಿ ಕೊಡುವ ನೀತಿ ಪಾಠವನ್ನು ನಾವು ಸಹ ಅನುಸರಿಸುವುದು ಅಷ್ಟೇ ಮುಖ್ಯವಾಗುತ್ತದೆ. ಇಲ್ಲವಾದರೆ ಮಕ್ಕಳದನ್ನು ಪ್ರಶ್ನಿಸುತ್ತಾರೆ. ವಿರೋಧಿಸುತ್ತಾರೆ. ಅದಕ್ಕೊಂದು ಅತ್ಯುತ್ತಮ ಉದಾಹರಣೆ ಇಲ್ಲಿದೆ.
ಅಪ್ಪನ ಜತೆ ಕಾರಿನಲ್ಲಿ ಹೋಗುತ್ತಿದ್ದ ರೂಬಿ ರಿಚರ್ಡಸನ್ ರಸ್ತೆಯಲ್ಲಿ ರೆಡ್ ಸಿಗ್ನಲ್ ಕಂಡಾಗ ತನ್ನ ತಂದೆ ಮೈಕಲ್ ರಿಚರ್ಡ್‍ಸನ್ ಕಾರ್ ನಿಲ್ಲಿಸುತ್ತಾನೆ ಎಂದುಕೊಂಡಿದ್ದ. ಆದರೆ ತನ್ನ ತಂದೆ ಹಾಗೆ ಮಾಡದಿದ್ದಾಗ ಅಪ್ಪ ನೀನು ಸಿಗ್ನಲ್ ಜಂಪ್ ಮಾಡಿದ್ದೀಯ. ನಾನು ಪೊಲೀಸರಿಗೆ ಕರೆ ಮಾಡುತ್ತೇನೆ ಎಂದಿದ್ದಾನೆ. ಮನೆಗೆ ಹೋದ ತಕ್ಷಣ ಅವನು ಮೊದಲು ಮಾಡಿದ್ದು ಅದೇ ಕೆಲಸ. ಪೊಲೀಸರಿಗೆ ದೂರವಾಣಿ ಕರೆ ಮಾಡಿ ಅಪ್ಪ ಮಾಡಿದ ತಪ್ಪನ್ನು ವಿವರಿಸಿದ. ಹೀಗಾಗಿ ಮೈಕಲ್ ರಿಚರ್ಡ್‍ಸನ್ ಪೊಲೀಸರಲ್ಲಿ ಕ್ಷಮೆ ಕೇಳುವಂತಾಯಿತು.