ಚೀನಾ ಜನಸಂಖ್ಯೆಯಲ್ಲಿ ಭಾರೀ ಕುಸಿತ
ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಚೀನಾದಲ್ಲಿ 6 ದಶಕಗಳಲ್ಲಿ ಇದೇ ಮೊದಲ ಬಾರಿಗೆ ಜನಸಂಖ್ಯೆ ಕುಸಿತವಾಗಿದೆ. ಜನಸಂಖ್ಯಾ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾರಣ ಚೀನಾದ ಜನಸಂಖ್ಯೆಯು ಆರು ದಶಕಗಳಲ್ಲಿ ಮೊದಲ ಬಾರಿಗೆ ಕಳೆದ ವರ್ಷ ಕುಗ್ಗಿದೆ ಎಂದು ಅಧಿಕೃತ ಅಂಕಿಅಂಶಗಳು ಮಂಗಳವಾರ ತೋರಿಸಿವೆ. ಚೀನಾ ಜನಸಂಖ್ಯೆ ಅಧಿಕೃತ ಅಂಕಿಅಂಶಗಳು ಬಿಡುಗಡೆಯಾಗಿದೆ. ಈ ಅಂಕಿ ಅಂಶಗಳ ಪ್ರಕಾರ ಚೀನಾದಲ್ಲಿ ಮಕ್ಕಳ ಜನನದ ಸಂಖ್ಯೆ ತೀವ್ರ ಇಳಿಮುಖವಾಗಿದೆ. ಜನಸಂಖ್ಯೆಯ ತೀವ್ರ ಕುಸಿತವು ಆರ್ಥಿಕ ಕುಸಿತಕ್ಕೆ ಸಹ ಕಾರಣವಾಗಬಹುದು ಎಂದು ಹಣಕಾಸು ವಿಶ್ಲೇಷಕರು ಚೀನಾ ಸರ್ಕಾರವನ್ನು ಎಚ್ಚರಿಸಿದ್ದಾರೆ. 2022 ರ ಅಂತ್ಯದ ವೇಳೆಗೆ ಚೀನಾದ ಜನಸಂಖ್ಯೆಯು 141.175 ಕೋಟಿಯಾಗಿತ್ತು. ಇದು 2021 ರ ಅಂತ್ಯದ ವೇಳೆಗೆ 85 ಲಕ್ಷದಷ್ಟು ಇಳಿಕೆಯಾಗಿದೆ ಎಂದು ವರದಿಯಾಗಿದೆ.