ಹೇಳಿದಷ್ಟು ವರನ ತೋರಿಸಲಿಲ್ಲವೆಂದು ಮಧ್ಯವರ್ತಿಗೆ ದಂಡ ವಿಧಿಸಿದ ಕೋರ್ಟ್!
ಮಹಿಳೆಯ ದೂರು ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯ ಬ್ರೋಕರ್ ಪ್ರಿಯಾಗೆ 5,000 ರೂ. ವೆಚ್ಚ ಸೇರಿದಂತೆ 55,000 ರೂ. ದಂಡ ಮಹಿಳೆಗೆ ನೀಡುವಂತೆ ತೀರ್ಪು ನೀಡಿದೆ. 2012 ರಲ್ಲಿ ಬ್ರೋಕರ್ ಗೆ ಮಹಿಳೆ ವರನನ್ನು ಹುಡುಕಿಕೊಡಲು 55,000 ರೂ. ಚೆಕ್ ಮೂಲಕ ನೀಡಿದ್ದಳಂತೆ. ಹೇಳಿದ ಹಾಗೆ ವರನನ್ನು ಹುಡುಕಿಕೊಡದ ತಪ್ಪಿಗೆ ಬ್ರೋಕರ್ ದಂಡ ತೆರುವಂತಾಗಿದೆ.