ಬಾಲಕಿಗೆ ಕುದಿಯುವ ಎಣ್ಣೆಯಲ್ಲಿ ಕೈಯಿಟ್ಟು ಆಣೆ ಮಾಡಲು ಹೇಳಿದ ಮಹಿಳೆ!

ಶುಕ್ರವಾರ, 24 ಸೆಪ್ಟಂಬರ್ 2021 (10:28 IST)
ಅಹಮ್ಮದಾಬಾದ್: ಅಪ್ರಾಪ್ತ ಬಾಲಕಿಗೆ ಮಹಿಳೆಯೊಬ್ಬರು ಕುದಿಯುವ ಎಣ್ಣೆಯಲ್ಲಿ ಕೈಯಿಟ್ಟು ನಿಜ ಹೇಳುತ್ತಿರುವುದಾಗಿ ಆಣೆ ಮಾಡಲು ಬಲವಂತ ಮಾಡಿದ ಘಟನೆ ಗುಜರಾತ್ ನಲ್ಲಿ ನಡೆದಿದೆ.


ಈ ಸಂಬಂಧ ಪೊಲೀಸರು 40 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ. ನೆರೆಮನೆಯ 11 ವರ್ಷದ ಬಾಲಕಿ ಮೇಲೆ ಮಹಿಳೆ ಕ್ರೌರ್ಯ ಮರೆದಿದ್ದಳು. ಅಪ್ರಾಪ್ತ ಬಾಲಕಿ ಕೈಗೆ ಸುಟ್ಟ ಗಾಯಗಳಾಗಿವೆ.

ಮಹಿಳೆ ಅನ್ಯ ಪುರುಷನೊಂದಿಗೆ ಮಾತನಾಡುವುದನ್ನು ಬಾಲಕಿ ನೋಡಿದ್ದಳು. ಇದರಿಂದ ಅನುಮಾನಗೊಂಡ ಮಹಿಳೆ ಬಾಲಕಿ ಮನೆಯಲ್ಲಿ ಪೋಷಕರು ಇಲ್ಲದ ಸಮಯ ನೋಡಿಕೊಂಡು ಆಕೆಯನ್ನು ಕರೆದು ಕುದಿಯುವ ಎಣ್ಣೆಗೆ ಕೈ ಹಾಕಿ ನೀನು ಯಾರಿಗೂ ಹೇಳಿಲ್ಲವೆಂದು ಆಣೆ ಮಾಡುವಂತೆ ಬೆದರಿಕೆ ಹಾಕಿದ್ದಾಳೆ.  ಬಾಲಕಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕೊಲೆ ಮಾಡಡುವುದಾಗಿ ಬೆದರಿಕೆ ಹಾಕಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ