Meghalaya Murder Case: ಗಂಡನ ಜತೆಗಿನ ಬೆಡ್‌ ರೂಂ ಸಂಗತಿಯನ್ನು ಪ್ರಿಯಕರನಿಗೆ ಒಪ್ಪಿಸಿದ್ಳು ಸೋನಮ್

Sampriya

ಮಂಗಳವಾರ, 10 ಜೂನ್ 2025 (19:27 IST)
ಮೇಘಾಲಯ: ಇಂದೋರ್‌ನ ಉದ್ಯಮಿ ರಾಜ ರಘುವಂಶಿ ಹತ್ಯೆ ಪ್ರಕರಣ ಸಂಬಂಧ ಇದೀಗ ಒಂದೊಂದೆ ಭಯಾನಕ ವಿಚಾರಗಳು ಬಯಲಾಗುತ್ತಿದೆ. ಪತಿಯ ಹತ್ಯೆಗಾಗಿ ಸೋನಮ್ ರೂಪಿಸಿದ ಮರ್ಡರ್ ಪ್ಲ್ಯಾನ್‌ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. 

ವಿಚಾರಣೆ ವೇಳೆ ತನ್ನ ಪತಿ ರಾಜ ರಘುವಂಶಿಯೊಂದಿಗೆ ದೈಹಿಕವಾಗಿ ಅನ್ಯೋನ್ಯವಾಗಿರಲು ಇಷ್ಟಪಡುತ್ತಿರಲಿಲ್ಲ ಎಂಬ ವಿಚಾರವಾನ್ನು ಗೆಳೆಯ ರಾಜ್‌ ಕುಶ್ವಾಹರಿಗೆ ಸೋನಂ ತಿಳಿಸಿದ್ದಾಳೆ. 

ರಾಜ್ ಕುಶ್ವಾಹರಿಗೆ ಈ ಸಂಬಂಧ ಮೆಸೇಜ್ ಮಾಡಿ ಸೋನಂ ಹೇಳಿಕೊಂಡಿರುವುದು ಬಯಲಾಗಿದೆ. ಪತಿಯೊಂದಿಗೆ ಭಾವನಾತ್ಮಕವಾಗಿ ದೂರವಾಗಿರುವುದಾಗಿ ಪ್ರಿಯಕರನೊಂದಿಗೆ ಹೇಳಿಕೊಂಡಿದ್ದಾಳೆ. 

ಮಧ್ಯಪ್ರದೇಶದ ಇಂದೋರ್‌ನ ನವಜೋಡಿಗಳು ಹನಿಮೂನ್‌ ಟೂರ್‌ ಭಯಾನಕ ಅಪರಾಧವಾಗಿ ಪರಿಣಮಿಸಿತು. ಈಗ ಮೇಘಾಲಯ ಪೊಲೀಸರು ತನಿಖೆ ನಡೆಸುತ್ತಿರುವ ಈ ಪ್ರಕರಣವು ನಿಜ ಜೀವನದ ಥ್ರಿಲ್ಲರ್‌ ಕಥೆಯಂತಾಗಿದೆ. 

ರಾಜಾ ಮತ್ತು ಸೋನಮ್ ಮೇ 11 ರಂದು ವಿವಾಹವಾದರು ಮತ್ತು ಮೇ 20 ರಂದು ತಮ್ಮ ಮಧುಚಂದ್ರಕ್ಕೆ ತೆರಳಿದರು. ಆರಂಭದಲ್ಲಿ ಕಾಶ್ಮೀರಕ್ಕೆ ಪ್ರವಾಸ ಯೋಜಿಸಿದ್ದರು, ಭಯೋತ್ಪಾದಕ ದಾಳಿಯ ವರದಿಗಳಿಂದಾಗಿ ಅವರು ಮೇಘಾಲಯಕ್ಕೆ ಪ್ರಯಾಣ ಬೆಳೆಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ