ಡೇಟಿಂಗ್ ಆ್ಯಪ್ ನ ಮೂಲಕ ಪರಿಚಯನಾದವ ಮನೆಗೆ ಕರೆದುಕೊಂಡು ಹೋಗಿ ಮಾಡಿದ್ದೇನು?

ಗುರುವಾರ, 28 ಜನವರಿ 2021 (09:35 IST)
ಭೋಪಾಲ್ : ಡೇಟಿಂಗ್ ಆ್ಯಪ್ ನ ಮೂಲಕ ಪರಿಚಯನಾದ ಯುವಕನೊಬ್ಬ ಹುಡುಗಿಯ ಮೇಲೆ ಮಾನಭಂಗ ಎಸಗಿದ ಘಟನೆ ಭೋಪಾಲ್ ನಲ್ಲಿ ನಡೆದಿದೆ.

ಆರೋಪಿ ಹಾಗೂ ಸಂತ್ರಸ್ತೆ ಇಬ್ಬರು ಡೇಟಿಂಗ್ ಆ್ಯಪ್ ನ ಮೂಲಕ ಪರಿಚಯರಾಗಿದ್ದಾರೆ. ಬಳಿಕ ಇಬ್ಬರು ಒಬ್ಬರನೊಬ್ಬರು ಭೇಟಿಯಾದಾಗ ಆರೋಪಿ ಸಂತ್ರಸ್ತೆಯನ್ನು ಮನೆಗೆ ಕರೆದೊಯ್ದು ಮಾನಭಂಗ ಎಸಗಿದ್ದಾನೆ.

ಹುಡುಗಿ ರಸ್ತೆಯಲ್ಲಿ ಒಬ್ಬಳೆ ಅಳುತ್ತಿರುವುದನ್ನು ನೋಡಿದ ಪೊಲೀಸ್ ಕಾನ್ ಸ್ಟೇಬಲ್ ಆಕೆಯನ್ನು ವಿಚಾರಿಸಿ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ