ಮಹಿಳೆಗೆ ಮತ್ತು ಬರುವ ಜ್ಯೂಸ್ ನೀಡಿ ಅತ್ಯಾಚಾರ ಎಸಗಿದ ಕಾಮುಕ
ಬುಧವಾರ, 10 ಮಾರ್ಚ್ 2021 (07:25 IST)
ಭೋಪಾಲ್ : ಅಂಗಡಿ ಮಾಲೀಕನೊಬ್ಬ ವಿವಾಹಿತ ಮಹಿಳೆಯೊಬ್ಬಳಿಗೆ ಜ್ಯೂಸ್ ನಲ್ಲಿ ಮತ್ತು ಬರುವ ಮಾತ್ರೆ ಮಿಕ್ಸ್ ಮಾಡಿ ಮಾನಭಂಗ ಎಸಗಿ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
40 ವರ್ಷದ ಮಹಿಳೆ ಕೆಲಸಕ್ಕಾಗಿ ಅಂಗಡಿಗೆ ಹೋದಾಗ ಹಣ್ಣಿನ ಜ್ಯೂಸ್ ಗೆ ಮತ್ತು ಬರುವ ಮಾತ್ರೆ ಮಿಕ್ಸ್ ಮಾಡಿ ಅವಳಿಗೆ ನೀಡಿ ಇಂತಹ ಕೃತ್ಯ ಎಸಗಿದ್ದಾನೆ. ಬಳಿಕ ಆ ವಿಡಿಯೊ ಬಳಸಿ ಆಕೆಗೆ ಹೆದರಿಸಿ ಪದೇ ಪದೆ ಮಾನಭಂಗ ಎಸಗಿದ್ದಾನೆ. ಈ ವಿಡಿಯೋವನ್ನು ನೋಡಿದ ಆರೋಪಿ ಅಂಗಡಿ ಮಾಲೀಕನ ಪತ್ನಿ ಅದನ್ನು ಸೊಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾಳೆ. ಈ ಹಿನ್ನಲೆಯಲ್ಲಿ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.