ಪತಿಯಿಲ್ಲದ ವೇಳೆ ಮನೆಗೆ ಬಂದ ಸೋದರಮಾವ ಹೀಗಾ ಮಾಡೋದು

ಶುಕ್ರವಾರ, 2 ಏಪ್ರಿಲ್ 2021 (09:25 IST)
ಮೀರತ್ : ವಿವಾಹಿತ ಮಹಿಳೆಯೊಬ್ಬಳ ಮೇಲೆ ಆಕೆಯ ಸೋದರ ಮಾವ ಮತ್ತು ಆತನ  ಸ್ನೇಹಿತ ಸೇರಿ ಮಾನಭಂಗ ಎಸಗಿದ ಘಟನೆ ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ.

ಮಹಿಳೆಯ ಪತಿ ಕುಡುಕನಾಗಿದ್ದು, ಮನೆಗೆ ಬಾರದ ಹಿನ್ನಲೆಯಲ್ಲಿ ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ತನ್ನ ಸ್ನೇಹಿತನ ಜೊತೆ ಮನೆಗೆ ನುಗ್ಗಿದ ಸೋದರ ಮಾವ ಗನ್ ಪಾಯಿಂಟ್ ತೋರಿಸಿ ಹೆದರಿಸಿ ಮಾನಭಂಗ ಎಸಗಿದ್ದಾನೆ. ಹಾಗೇ ಈ ಬಗ್ಗೆ ಯಾರಿಗೂ ತಿಳಿಸದಂತೆ ಎಚ್ಚರಿಕೆ ಹಾಕಿದ್ದಾನೆ.

ಆದರೆ ಮಹಿಳೆ ಈ ಬಗ್ಗೆ ಪೊಲಿಸರಿಗೆ  ದೂರು ನೀಡಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
   

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ