ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯಿಂದ ಹಣ ದೋಚಿದವ ಕೊನೆಗೆ ಮಾಡಿದ್ದೇನು ?

ಮಂಗಳವಾರ, 20 ಏಪ್ರಿಲ್ 2021 (07:18 IST)
ಪುಣೆ : ವ್ಯಕ್ತಿಯೊಬ್ಬ ಸಿಂಗಾಪುರದಲ್ಲಿ ಉದ್ಯೋಗ ಪಡೆಯಲು ಮತ್ತು ನರ್ಸಿಂಗ್ ಕೋರ್ಸ್ ಮಾಡಲು ಹೀಗೆ ಹಲವಾರು ನೆಪ ಹೇಳಿ ಮಹಿಳೆಯೊಬ್ಬಳಿಂದ 11ಲಕ್ಷ ರೂ.ಬಿಟ್ ಕಾಯಿನ್ ಹೂಡಿಕೆ ಮಾಡಲು ಹೇಳಿದ್ದಲ್ಲದೇ ಆಕೆಯ ಮೇಲೆ ಮಾನಭಂಗ ಎಸಗಿದ ಘಟನೆ ಪುಣೆಯಲ್ಲಿ ನಡೆದಿದೆ.

ಮಹಿಳೆ ತನಗೆ ಮೋಸ ಮಾಡಿದ್ದಾನೆಂದು ತಿಳಿದು ಹಣವನ್ನು ವಾಪಾಸು ಕೇಳಿದರೆ ಮಾನಭಂಗದ ವಿಡಿಯೋ ಮಾಡಿದ್ದು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಮಹಿಳೆಗೆ ಮತ್ತೆ ಮತ್ತೆ ಸಂಭೋಗ ನಡೆಸಲು ಒತ್ತಾಯಿಸುತ್ತಿದ್ದ.

ಈ ಹಿನ್ನಲೆಯಲ್ಲಿ  ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ