ಕೋತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಕಾರು ಕಳುಹಿಸಿದ ಸಂಸದೆ ಮೇನಕಾ ಗಾಂಧಿ

ಮಂಗಳವಾರ, 19 ನವೆಂಬರ್ 2019 (06:25 IST)
ನವದೆಹಲಿ : ಸಂಸದೆ ಮೇನಕಾ ಗಾಂಧಿ ಅವರು ಗಾಯಗೊಂಡ ಪ್ರಾಣಿಯೊಂದನ್ನು ಆಸ್ಪತ್ರೆಗೆ ಕರೆದೊಯ್ಯಲು ಕಾರು ಕಳುಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.




ಪತ್ರಕರ್ತೆಯೊಬ್ಬರು  ಗಾಯಗೊಂಡು  ಸಂಕಷ್ಟದಲ್ಲಿರುವ ಕೋತಿಯೊಂದರ ಫೋಟೋ ಹಾಕಿ ಸಹಾಯ ಮಾಡುವಂತೆ ಟ್ವೀಟ್ ಮಾಡಿದ್ದರು. ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ ಸಂಸದೆ ಮೇನಕಾ ಗಾಂಧಿ, ಕೋತಿಯ ಫೋಟೋ ಹಾಕಿ ಈ ಕೋತಿಗೆ ಸಹಾಯ ಮಾಡುವಂತೆ ಎನ್ ಜಿಓ ಅಥವಾ ಪ್ರಾಣಿ ಹಕ್ಕುಗಳ ಕಾರ್ಯಕರ್ತರಲ್ಲಿ  ಮನವಿ ಮಾಡಿ ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಕೋತಿಯ ಸಹಾಯಕ್ಕೆ ಧಾವಿಸಿದ್ದಾರೆ.


ಅಲ್ಲದೇ ಕೋತಿಯನ್ನು ಸಂಜಯ್ ಗಾಂಧಿ ಪ್ರಾಣಿ ಸಂರಕ್ಷಣಾ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದೊಯ್ಯಲು ಕಾರು ಕಳುಹಿಸಿದ್ದೇನೆ ಎಂದು ಮೇನಕಾ ಗಾಂಧಿಯವರು ಪತ್ರಕರ್ತೆಗೆ ಟ್ವೀಟ್ ಮಾಡಿ ತಿಳಿಸಿದ್ದು, ಅವರ ಪ್ರಾಣಿ ಪ್ರೇಮಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ