ಹುಡುಗಿಯನ್ನು ಅಪಹರಿಸಿ ಮಾನಭಂಗ ಎಸಗಿದ ಮೂವರು ಪುರುಷರು!

ಬುಧವಾರ, 24 ಮಾರ್ಚ್ 2021 (07:04 IST)
ಚೆನ್ನೈ : ಹದಿಹರೆಯದ ಹುಡಗಿಯನ್ನು ಮೂವರು ಪುರುಷರು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಹುಡುಗಿಗೆ ಪರಿಚಯವಿದ್ದ ಆರೋಪಿಯೊಬ್ಬ ಆಕೆಯನ್ನು ಹೋಟೆಲ್ ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಮೂವರು ಸೇರಿ 2 ದಿನಗಳ ಕಾಲ ಆಕೆಯನ್ನು ಕೂಡಿಹಾಕಿ ಮಾನಭಂಗ ಎಸಗಿದ್ದಾರೆ. ಬಳಿಕ ಆಕೆ ತನ್ನ ಮನೆಗೆ ಬಂದು ಪೋಷಕರಿಗೆ ವಿಷಯ ತಿಳಿಸಿದ್ದಾಳೆ.

ಈ ಬಗ್ಗೆ ಹುಡುಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ  ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ