ಜನಪ್ರಿಯ ಹಾಸ್ಯ ನಟ ಥೀಪೆಟ್ಟಿ ಗಣೇಶನ್ ನಿಧನ

ಮಂಗಳವಾರ, 23 ಮಾರ್ಚ್ 2021 (09:09 IST)
ಚೆನ್ನೈ : ಜನಪ್ರಿಯ ಹಾಸ್ಯ ನಟ ಥೀಪೆಟ್ಟಿ ಗಣೇಶನ್ ಅವರು ಅನಾರೋಗ್ಯದಿಂದ ಹಠಾತ್ ಆಗಿ ಸಾವನಪ್ಪಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಅನಾರೋಗ್ಯದ ಹಿನ್ನಲೆಯಲ್ಲಿ ಅವರನ್ನು ಮಧುರೈನ ರಾಜಾಜಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ದುರಾದೃಷ್ಟವಶಾತ್ ಅವರು ಸಾವನಪ್ಪಿದ್ದಾರೆ. ಈ ವಿಚಾರವನ್ನು ನಿರ್ದೇಶಕ ಸೀನು ರಾಮಸ್ವಾಮಿ ತಿಳಿಸಿದ್ದಾರೆ.

ಇವರು 2009ರಲ್ಲಿ ಸೂಪರ್ ಹಿಟ್ ಚಿತ್ರ ‘ರೆನಿಗುಂಟಾ’ ಮತ್ತು ನಂತರದ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ