ಅಮರನಾಥ್ ಯಾತ್ರಿಗಳ ಮೇಲೆ ದಾಳಿಗೆ ಉಗ್ರರ ಸಂಚು: ಗುಪ್ತಚರ ವರದಿ

ಮಂಗಳವಾರ, 27 ಜೂನ್ 2017 (19:00 IST)
ನಾಳೆಯಿಂದ ಆರಂಭವಾಗಲಿರುವ ಅಮರನಾಥ್ ಯಾತ್ರೆಗಾಗಿ ಬಿಗಿ ಭದ್ರತೆ ಏರ್ಪಡಿಸಿರುವ 100 ಪೊಲೀಸರು ಮತ್ತು ನೂರಾರು ಯಾತ್ರಿಗಳನ್ನು ಹತ್ಯೆಗೈಯುವ ಸಂಚು ಉಗ್ರರು ರೂಪಿಸಿದ್ದರಿಂದ ಮತ್ತಷ್ಟು ಕಟ್ಟೆಚ್ಚರ ವಹಿಸಲಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
 
ಅಮರನಾಥ್ ಯಾತ್ರೆಗೆ ತೆರಳುತ್ತಿರುವ 100 ರಿಂದ 150 ಯಾತ್ರಿಕರು ಮತ್ತು 100 ಪೊಲೀಸ್ ಅಧಿಕಾರಿಗಳನ್ನು ಹತ್ಯೆಗೈಯುವಂತೆ ಉಗ್ರರಿಗೆ ನಿರ್ದೇಶನ ನೀಡಲಾಗಿದೆ ಎಂದು ಅನಂತ್‌ನಾಗ್ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಪ್ತ ಮಾಹಿತಿಯನ್ನು ಗುಪ್ತಚರ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಗುಪ್ತಚರ ದಳದ ಅಧಿಕಾರಿಗಳು ಮಾಹಿತಿಯನ್ನು ಸೇನೆಗೆ ರವಾನಿಸಿದ್ದಾರೆ. 
 
ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಅಮರನಾಥ್ ಪವಿತ್ರ ಗುಹೆ ದೇವಾಲಯಕ್ಕೆ 40 ದಿನಗಳ ಕಾಲ ನಡೆಯುವ ಯಾತ್ರೆ ನಾಳೆ ಆರಂಭವಾಗಲಿದೆ ಎಂದು ವಿಭಾಗೀಯ ಆಯುಕ್ತ ಮನ್ದೀಪ್ ಭಂಡಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
 
ಕೇಂದ್ರ ಸರ್ಕಾರ ಯಾತ್ರಿಗಳ ಭದ್ರತೆಗಾಗಿ ಪೊಲೀಸ್, ಸೈನ್ಯ, ಬಿಎಸ್ಎಫ್ ಮತ್ತು ಸಿಆರ್‌ಪಿಎಫ್ ಸೇರಿದಂತೆ 35,000 ಕ್ಕಿಂತ 40,000 ಸೈನಿಕರು ಭಾರಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ