ಯೋಧರೊಂದಿಗೆ ಹೊಸವರ್ಷ ಆಚರಿಸಿದ ಸಚಿವ ರಾಜನಾಥ್ ಸಿಂಗ್

ಸೋಮವಾರ, 1 ಜನವರಿ 2018 (12:49 IST)
ಕೇಂದ್ರ ಸರ್ಕಾರದ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಹೊಸ ವರ್ಷದ ಆಚರಣೆಯನ್ನು ಯೋಧರೊಂದಿಗೆ ಮಾಡಿದ್ದಾರೆ.
 
ಉತ್ತರಕಾಶಿ ಮಟ್ಲಿಯಲ್ಲಿರುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ) ಬೆಟಾಲಿಯನ್ ಕೇಂದ್ರ ಕಚೇರಿಗೆ ಭೇಟಿ ನೀಡಿ ಅವರು ಮುದ್ರದ ಮಟ್ಟದಿಂದ 11,700 ಅಡಿಗಳಷ್ಟು ಎತ್ತರದಲ್ಲಿರುವ ನಿಲಾಂಗ್ ಬಾರ್ಡರ್ ಔಟ್‍ಪೋಸ್ಟ್(ಬಿಪಿಒ)ನಲ್ಲಿ ಐಟಿಬಿಪಿ ಸಿಬ್ಬಂದಿಯೊಂದಿಗೆ ಹೊಸ ವರ್ಷ ಆಚರಿಸಿಕೊಂಡರು.
 
ಕಳೆದ ಸೆಪ್ಟೆಂಬರ್‌ನಲ್ಲಿ ನಾಲ್ಕು ದಿನಗಳ ಪ್ರವಾಸ ಕೈಗೊಂಡಿದ್ದ ಸಿಂಗ್ ಅವರು ಎರಡನೇ ಬಾರಿಗೆ ಉತ್ತರಖಂಡದಲ್ಲಿನ ಭಾರತ-ಚೀನಾ ಗಡಿ ಪ್ರದೇಶಕ್ಕೆ ಭೇಟಿ ನೀಡಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ