ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಹೊಸವರ್ಷವನ್ನು ಎಲ್ಲಿ ಆಚರಿಸಲಿದ್ದಾರೆ ಗೊತ್ತಾ…?

ಶನಿವಾರ, 30 ಡಿಸೆಂಬರ್ 2017 (08:47 IST)
ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಹಾಗು ನಟಿ ದೀಪಿಕಾ ಪಡುಕೋಣೆ ಅವರ  ಜೋಡಿ ಈ ವರ್ಷ ಹೊಸ ವರ್ಷವನ್ನು ವಿದೇಶದಲ್ಲಿ ಸೆಲೆಬ್ರೆಟ್ ಮಾಡಲಿದ್ದಾರೆ.


ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತಿರುವ ಈ ಜೋಡಿ ಹೊಸ ವರ್ಷವನ್ನು ಶ್ರೀಲಂಕಾದಲ್ಲಿ ಆಚರಿಸಲಿದ್ದು, ಪ್ರತಿವರ್ಷದಂತೆ ಈ ವರ್ಷವೂ ಕೂಡ ನ್ಯೂ ಇಯರ್ ಗಾಗಿ ಹೊಸ ಪ್ಲಾನ್ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಆಸ್ಟ್ರೇಲಿಯಾದಲ್ಲಿದ್ದ ದೀಪಿಕಾ ಪಡುಕೋಣೆ ಅಲ್ಲಿಂದ ಶ್ರೀಲಂಕಾಗೆ ಬಂದು ರಣವೀರ್ ಜೊತೆ ಸೇರಿ ಹೊಸ ವರ್ಷವನ್ನು ಸೆಲೆಬ್ರೆಟ್ ಮಾಡಲಿದ್ದಾರೆ.


ರಣವೀರ್ ಅವರು ದೀಪಿಕಾ ಕುಟುಂಬದವರ ಜೊತೆ ಹೊಸ ವರ್ಷ ಆಚರಿಸುವ ತಯಾರಿ ನಡೆಸಿದ್ದು , ಈಗ ಆ ಪ್ಲಾನ್ ಬದಲಾಗಿದೆ ಎಂದು ತಿಳಿದುಬಂದಿದೆ. ರಣವೀರ್ ಅವರು ದೀಪಿಕಾ ಕುಟುಂಬದವರನ್ನು ಭೇಟಿಯಾದ ಕಾರಣ ಅವರ ಮದುವೆ ವಿಷಯ ಪ್ರಸ್ತಾಪಿಸಲು ಎಂಬ ವದಂತಿ ಎಲ್ಲಾಕಡೆ ಕೇಳಿಬರುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ