ಅಪ್ರಾಪ್ತೆ ಮೇಲೆ ಬಿತ್ತು ಮಧ್ಯವಯಸ್ಕನ ಕಾಮದ ಕಣ್ಣು
ಬುಡಕಟ್ಟು ಜನಾಂಗಕ್ಕೆ ಸೇರಿದ ಯುವತಿಯನ್ನು ಮನೆಗೆಲಸಕ್ಕೆ ಮನೆಗೆ ಕರೆದಿದ್ದ ಆರೋಪಿ ಬಳಿಕ ಆಕೆಯನ್ನು ಮನೆಗೆ ಬಿಡುವುದಾಗಿ ಮೋಟಾರ್ ಬೈಕ್ ನಲ್ಲಿ ಕೂರಿಸಿಕೊಂಡು ಲಾಡ್ಜ್ ಒಂದಕ್ಕೆ ಕರೆದೊಯ್ದಿದ್ದಾನೆ.
ಅಲ್ಲಿ ಆಕೆಯ ಮೇಲೆ ದೌರ್ಜನ್ಯ ನಡೆಸಿದ್ದಾನೆ. ಕೂಗಿಕೊಂಡಾಗ ಸಂತ್ರಸ್ತೆಯ ಮೇಲೆ ಹಲ್ಲೆ ನಡೆಸಿ ಕೈ ಕಟ್ಟಿ ಹಾಕಿ ಬಾಯಿ ಮುಚ್ಚಿಸಿದ್ದಾನೆ. ಕಾಮತೃಷೆ ತೀರಿಸಿಕೊಂಡ ಬಳಿಕ ಮನೆಗೆ ಕರೆತಂದಿದ್ದಾನೆ. ಇದೀಗ ಯುವತಿಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.