ಅಪ್ರಾಪ್ತರ ಫೇಸ್‌ಬುಕ್ ಸ್ನೇಹ, ಲಿವಿಂಗ್ ಟುಗೆದರ್, ಮುಂದೇನಾಯ್ತು?

ಮಂಗಳವಾರ, 31 ಜನವರಿ 2017 (10:58 IST)
ಅಪ್ರಾಪ್ತ ಬಾಲಕಿಯೋರ್ವಳು ತನ್ನ ಫೇಸ್‌ಬುಕ್ ಸ್ನೇಹಿತನಿಂದ ಅತ್ಯಾಚಾರಕ್ಕೊಳಗಾದ ಬೆಚ್ಚಿಬೀಳಿಸುವ ಘಟನೆ ಒಡಿಶಾದ ಕಟಕ್‌ನಲ್ಲಿ ನಡೆದಿದೆ. ಆರೋಪಿಯೂ ಸಹ ಅಪ್ರಾಪ್ತನಾಗಿದ್ದು ಆತನೀಗ ಪೊಲೀಸರ ವಶದಲ್ಲಿದ್ದಾನೆ. 

ಘಟನೆ ವಿವರ: ಜೈಪುರದ ನಿವಾಸಿಯಾಗಿರುವ ಬಾಲಕಿ ಮತ್ತು ಕಟಕ್‌ನ ಬಾಲಕನಿಗೆ ಕಳೆದ 6 ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿತ್ತು. ತಾನು ವಾಸವಾಗಿರುವ ನಗರಕ್ಕೆ ಬರುವಂತೆ ಬಾಲಕ ಆಹ್ವಾನಿಸಿದ್ದು, ಆತನ ಕರೆಯ ಮೇರೆಗೆ ಜನವರಿ 26ರಂದು ಆಕೆ ಕಟಕ್‌ಗೆ ಬಂದಿಳಿದಿದ್ದಾಳೆ.
 
ಆಕೆಯನ್ನು ಬರಮಾಡಿಕೊಂಡ ಬಾಲಕ ಬದಾಮ್‌ಬಾಡಿ ಪ್ರದೇಶದಲ್ಲಿ ಬಾಡಿಗೆ ಮನೆ ಮಾಡಿ ಆಕೆಯೊಂದಿಗೆ ವಾಸ್ತವ್ಯ ಹೂಡಿದ್ದಾನೆ. ಮೂರು ದಿನ ಆಕೆಯ ಜತೆಗಿದ್ದ ಬಾಲಕ ಆಕೆಯನ್ನು ದೈಹಿಕವಾಗಿ ಬಳಸಿಕೊಂಡಿದ್ದು, ಜನವರಿ 29ರಂದು ನಾಪತ್ತೆಯಾಗಿದ್ದಾನೆ. 
 
ಹೊಸ ಊರಿನಲ್ಲಿ ಕಂಗಾಲಾದ ಬಾಲಕಿ ಮಕ್ಕಳ ಸಹಾಯವಾಣಿ ಸ್ವಯಂ ಸೇವಾಸಂಸ್ಥೆ ಸಂಪರ್ಕಕ್ಕೆ ಬಂದು ತನ್ನ ಕಥೆಯನ್ನು ಹೇಳಿಕೊಂಡಿದ್ದಾಳೆ. 
 
ಸ್ವಯಂ ಸೇವಾ ಸಂಸ್ಥೆ ನೀಡಿರುವ ದೂರಿನ ಆಧಾರದ ಮೇಲೆ ಆರೋಪಿ ಬಾಲಕನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಬಾಲಕಿಯ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ