ಮನೆಯಲ್ಲೇ ಕೂಡಿಹಾಕಿ ಯುವತಿಯ ಮೇಲೆ ಅತ್ಯಾಚಾರ
ಯುವತಿ ಮನೆಯಲ್ಲಿ ಒಬ್ಬಳೇ ಇದ್ದಾಗ ಮನೆಗೆ ಬಂದ ಆರೋಪಿ ಬಾಗಿಲು ಭದ್ರಪಡಿಸಿ ಹೇಯ ಕೃತ್ಯವೆಸಗಿದ್ದಾನೆ. ಯುವತಿ ಕಿರುಚಿಕೊಂಡಾಗ ಯಾರಿಗಾದರೂ ಹೇಳಿದರೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಬೆದರಿಸಿದ್ದಾನೆ.
ಮನೆಗೆ ತಾಯಿ ಬಂದಾಗ ಯುವತಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ತಕ್ಷಣವೇ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.