ಮಗು ಪಡೆಯಲು ಯುವತಿ ಮೇಲೆ ಹೀಗೆಲ್ಲಾ ಅನಾಚಾರ ಮಾಡೋದಾ?!
ಮಹಾರಾಷ್ಟ್ರ ಮೂಲದ ಯುವತಿಯನ್ನು ಆಕೆಯ ಸಂಬಂಧಿಕ ಮಹಿಳೆಯ ಸಹಾಯದಿಂದ ಹಣಕ್ಕೆ ಖರೀದಿ ಮಾಡಿದ್ದ ರಾಜ್ ಪಾಲ್ ಸಿಂಗ್ (38) ಎಂಬಾತ ಆಕೆಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದ. ಬಳಿಕ ಆಕೆ ಗರ್ಭಿಣಿಯಾದಾಗ ಆಕೆಗೆ ಬಲವಂತವಾಗಿ ಮಗು ಹೆರಲು ಒತ್ತಾಯಿಸಿದ್ದ. ಇದಕ್ಕೆಲ್ಲಾ ಆರೋಪಿಯ ಪತ್ನಿಯೂ ಸಾಥ್ ನೀಡಿದ್ದಳು.
ತಮ್ಮ ಕೆಲಸ ಮುಗಿದ ಬಳಿಕ ಮಹಿಳೆಯನ್ನು ಅಪರಿಚತ ಜಾಗದಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಬಳಿಕ ಸ್ಥಳೀಯರ ಸಹಾಯದಿಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.