ಫ್ರೆಂಡ್ ಶಿಪ್ ನಿರಾಕರಿಸಿದ್ದಕ್ಕೇ ಯುವತಿಯ ಹತ್ಯೆ

ಗುರುವಾರ, 18 ಫೆಬ್ರವರಿ 2021 (10:49 IST)
ನೋಯ್ಡಾ: ಫ್ರೆಂಡ್ ಶಿಪ್ ನಿರಾಕರಿಸಿದ್ದಕ್ಕೆ ನೆರೆಮನೆಯ ಯುವಕ 16 ವರ್ಷದ ಅಪ್ರಾಪ್ತ ಯುವತಿಯನ್ನು ಹತ್ಯೆ ಮಾಡಿದ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.


ಫೆಬ್ರವರಿ 8 ರಂದು ಈ ಪ್ರಕರಣ ನಡೆದಿತ್ತು. ಇದೀಗ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ. ಮನೆಯ ನೆಲಮಹಡಿಯಲ್ಲೇ ಯುವತಿಯ ಶವ ಪತ್ತೆಯಾಗಿತ್ತು. ಸಂತ್ರಸ್ತ ಯುವತಿಯ ಮನೆಯವರು ಹತ್ಯೆಗೆ ಮುನ್ನ ಆರೋಪಿ ಮಾನಭಂಗ ಮಾಡಿದ್ದಾಗಿ ಆರೋಪಿಸಿದ್ದಾರೆ. ಪೊಲೀಸರು ಆ ನಿಟ್ಟಿನಲ್ಲೂ ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ