ಅಪ್ರಾಪ್ತೆಯ ಮೇಲೆ ತಂದೆಯ ಸ್ನೇಹಿತನಿಂದ ಅತ್ಯಾಚಾರ
ಸಂಜೆ ಅಂಗಡಿಗೆ ಹೋಗುತ್ತಿದ್ದಾಗ ಬಾಲಕಿಯನ್ನು ಅಡ್ಡಗಟ್ಟಿದ ಕಾಮುಕ ತನ್ನೊಂದಿಗೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಪರಿಚಿತನಾಗಿದ್ದರಿಂದ ಆತನ ಮಾತು ನಂಬಿ ಬಾಲಕಿಯೂ ಜೊತೆಗೆ ಹೋಗಿದ್ದಾಳೆ.
ಬಳಿಕ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರವೆಸಗಿದ್ದಾನೆ. ಬಾಲಕಿಯ ಕಿರುಚಾಟ ಕೇಳಿ ಸ್ಥಳೀಯರು ರಕ್ಷಿಸಿದ್ದಾರೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.