ಆಡೋಣ ಬಾ ಎಂದು 4 ವರ್ಷದ ಮಗುವಿನ ಜೊತೆ ಈ ಅಪ್ರಾಪ್ತ ಆಡಿದ ಆಟವೇ ಬೇರೆ!
14 ವರ್ಷದ ಅಪ್ರಾಪ್ತನೊಬ್ಬ ತನ್ನ ನೆರೆಮನೆಯ 4 ವರ್ಷದ ಹೆಣ್ಣು ಮಗುವನ್ನು ಆಡುವ ನೆಪದಲ್ಲಿ ಮನೆಗೆ ಕರೆದು ಯಾರೂ ಇಲ್ಲದ ಜಾಗದಲ್ಲಿ ಲೈಂಗಿಕವಾಗಿ ದೌರ್ಜನ್ಯ ನಡೆಸಿದ ಘಟನೆ ನಡೆದಿದೆ.
ಮನೆಗೆ ಬಂದ ಮೇಲೆ ಮಗುವಿಗೆ ಸ್ನಾನ ಮಾಡಿಸುವಾಗ ಖಾಸಗಿ ಅಂಗಾಂಗ ನೋವಾಯಿತೆಂದು ಜೋರಾಗಿ ಅತ್ತಾಗ ವಿಚಾರ ಬೆಳಕಿಗೆ ಬಂದಿದೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಈ ಸಂಬಂಧ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.