ಪತ್ನಿ ಮೇಲಿನ ಸಿಟ್ಟಿಗೆ ಬಾಮೈದನ ಕೊಂದ ವ್ಯಕ್ತಿ

ಮಂಗಳವಾರ, 1 ಫೆಬ್ರವರಿ 2022 (09:30 IST)
ಅಹಮ್ಮದಾಬಾದ್: ಪತ್ನಿ ಮೇಲಿನ ಸಿಟ್ಟಿಗೆ ಗುಜರಾತ್ ನಲ್ಲಿ ವ್ಯಕ್ತಿಯೊಬ್ಬ ತನ್ನ 8 ವರ್ಷದ ಬಾಮೈದನನ್ನೇ ಕೊಲೆ ಮಾಡಿದ ಘಟನೆ ನಡೆದಿದೆ.

ಕೆಲವು ದಿನಗಳ ಹಿಂದೆ ಪತ್ನಿ ಜೊತೆಗೆ ಆರೋಪಿಗೆ ಜಗಳವಾಗಿತ್ತು. ಇದರ ಬೆನ್ನಲ್ಲೇ 8 ವರ್ಷದ ಆಕೆಯ ಸಹೋದರನನ್ನು ಆಟೋ ರಿಕ್ಷಾವೊಂದರಲ್ಲಿ ಕೂರಿಸಿಕೊಂಡು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದ. ಬಳಿಕ ಕೊಲೆ ಮಾಡಿ ನಾಲೆಯೊಂದರಲ್ಲಿ ಮೃತದೇಹ ಬಿಸಾಕಿದ್ದ.

ಆತನ ಕೃತ್ಯವನ್ನು ನೋಡಿದ್ದ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ