ಚಂಡೀಗಡ: ಸಮಾಜ ಸೇವಕ ಮತ್ತು ಉದ್ಯಮಿ ಎಂ.ಕೆ. ಪ್ರತಿ ವರ್ಷ ತನ್ನ ವಿಶಿಷ್ಟ ಸೇವೆಗಳ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಈ ಬಾರೀ ಮತ್ತೇ ದೀಪಾವಳಿ ಹೊಸ್ತಿಲಲ್ಲಿ ಸುದ್ದಿಯಾಗಿ, ದೇಶದ ಗಮನ ಸೆಳೆದಿದ್ದಾರೆ.
ಈ ಬಾರಿ ಭಾಟಿಯಾ ಅವರು ತಮ್ಮ ಕಂಪನಿಯಲ್ಲಿ ಉತ್ತಮ ಫರ್ಪಾಮೆನ್ಸ್ ತೋರಿದ ಉದ್ಯೋಗಿಗಳಿಗೆ ಮತ್ತು ಸೆಲೆಬ್ರಿಟಿ ತಂಡದ ಸದಸ್ಯರಿಗೆ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮತ್ತೊಮ್ಮೆ ಪಟ್ಟಣದ ಚರ್ಚೆಯಾಗಿದ್ದಾರೆ.
ಭಾಟಿಯಾ ಅವರು ಒಟ್ಟು 51 ಹೊಚ್ಚಹೊಸ ಕಾರುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದ್ದಾರೆ
ನೀವು ಪ್ರತಿ ವರ್ಷ ಇಂತಹ ದುಬಾರಿ ಕಾರುಗಳನ್ನು ಏಕೆ ಉಡುಗೊರೆಯಾಗಿ ನೀಡುತ್ತೀರಿ ಎಂದು ಕೇಳಿದಾಗ, ಭಾಟಿಯಾ ಅವರು ಮನಃಪೂರ್ವಕ ವಿವರಣೆಯನ್ನು ಹಂಚಿಕೊಂಡರು.
"ನನ್ನ ಸಹವರ್ತಿಗಳು ನನ್ನ ಔಷಧೀಯ ಕಂಪನಿಗಳ ಬೆನ್ನೆಲುಬು. ಅವರ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಸಮರ್ಪಣೆ ನಮ್ಮ ಯಶಸ್ಸಿನ ಅಡಿಪಾಯವಾಗಿದೆ. ಅವರ ಪ್ರಯತ್ನಗಳನ್ನು ಗುರುತಿಸುವುದು ಮತ್ತು ಅವರನ್ನು ಪ್ರೇರೇಪಿಸುವುದು ನನ್ನ ಏಕೈಕ ಗುರಿಯಾಗಿದೆ ಎಮದರು.
ಈ ನಡೆ ಪ್ರಚಾರಕ್ಕೆ ಅಲ್ಲ, ಆದರೆ ತಂಡದ ಮನೋಭಾವವನ್ನು ಬಲಪಡಿಸುವುದು ಮತ್ತು ಸಂಸ್ಥೆಯೊಳಗೆ ಕುಟುಂಬದಂತಹ ಬಾಂಧವ್ಯವನ್ನು ಬೆಳೆಸುವುದು ಎಂದು ಭಾಟಿಯಾ ಒತ್ತಿ ಹೇಳಿದರು. "ತಂಡವು ಸಂತೋಷವಾಗಿರುವಾಗ, ಕಂಪನಿಯು ಸ್ವಾಭಾವಿಕವಾಗಿ ಬೆಳೆಯುತ್ತದೆ" ಎಂದು ಅವರು ಹೇಳಿದರು.