ಧ್ವಾರಕ್ಕೆ ಉಗುಳಿದ MLA: ಯುಪಿ ಸರ್ಕಾರದಿಂದ ವಿಧಾನಸಭೆಯಲ್ಲಿ ಪಾನ್ ಮಸಾಲಾ, ಗುಟ್ಕಾ ನಿಷೇಧ
ಈ ಬಗ್ಗೆ ಮಾತನಾಡಿದ ಸ್ಪೀಕರ್ ಅವರು, ವಿಧಾನಸೌಧದ ಧ್ವಾರಕ್ಕೆ ಪಾನ್ ಮಸಾಲ ಸೇವಿಸಿ ಉಗುಳಿರುವ ಬಗ್ಗೆ ಮಾಹಿತಿ ಸಿಕ್ಕಿತು. ಹೀಗಾಗಿ ಇಲ್ಲಿಗೆ ಬಂದು ಸ್ವಚ್ಛ ಮಾಡಿದ್ದೇನೆ. ವಿಡಿಯೋದಲ್ಲಿ ಶಾಸಕರನ್ನು ನೋಡಿದ್ದೇನೆ. ಆದರೆ ಯಾರನ್ನೂ ಅವಹೇಳನ ಮಾಡಲು ನಾನು ಬಯಸುವುದಿಲ್ಲ. ಆದರೆ ನಾನು ಅವರ ಹೆಸರು ಹೇಳುತ್ತಿಲ್ಲ.ಯಾರಾದರೂ ಈ ರೀತಿ ಮಾಡುವುದನ್ನು ಕಂಡರೆ ಅವರನ್ನು ತಡೆಯಬೇಕು ಎಂದು ಎಲ್ಲ ಸದಸ್ಯರಿಗೆ ಮನವಿ ಮಾಡುತ್ತೇನೆ ಎಂದರು.