ಇನ್ನು ಮುಂದೆ ಮೊಬೈಲ್ ಗೆ 10 ರ ಬದಲು 11 ಸಂಖ್ಯೆ?

ಶನಿವಾರ, 30 ಮೇ 2020 (09:24 IST)
ನವದೆಹಲಿ: ನಿಮ್ಮ ಮೊಬೈಲ್ ನಂಬರ್ ನಲ್ಲಿ ಎಷ್ಟು ಅಂಕಿಗಳಿವೆ? ಎಲ್ಲರಿಗೂ ಗೊತ್ತಿರುವ ಹಾಗೆ 10 ಅಂಕಿಗಳಿವೆ. ಆದರೆ ಇನ್ನು ಮುಂದೆ ಇದು 11 ಆಗಬಹುದು!


ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಇಂತಹದ್ದೊಂದು ಪ್ರಸ್ತಾಪವನ್ನು ಕೇಂದ್ರದ ಮುಂದಿಟ್ಟಿದೆ. ಈಗಿರುವ ಮೊಬೈಲ್ ಸಂಖ್ಯೆಯನ್ನು 11 ಅಂಕೆಗಳಾಗಿ ಬದಲಾಯಿಸಲು ಶಿಫಾರಸ್ಸು ಮಾಡಿದೆ.

ಪ್ರತೀ ಮೊಬೈಲ್ ಸಂಖ್ಯೆಯ ಮುಂದೆ 9 ಸೇರಿಸಿ 11 ಅಂಕಿಗಳಿಗೆ ಏರಿಕೆ ಮಾಡಬೇಕು. ಇದರಿಂದ ಮೊಬೈಲ್ ಸಂಖ್ಯೆಗಳ ಸಾಮರ್ಥ್ಯ 10 ಶತಕೋಟಿ ತಲುಪಬಹುದು ಎಂದು ಟ್ರಾಯ್ ಸಲಹೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ