ನವದೆಹಲಿ: ಒಂದೆಡೆ ವಿಶ್ವವೇ ಕೊರೋನಾ ವಿರುದ್ಧ ಹೋರಾಡುತ್ತಿದ್ದರೆ, ಇದನ್ನು ವಿಶ್ವಕ್ಕೇ ಹರಡಿದ ಚೀನಾ ಯುದ್ಧೋತ್ಸಾಹದಲ್ಲಿದೆ.
ಭಾರತ, ತೈವಾನ್ ಮತ್ತು ಅಮೆರಿಕಾದೊಂದಿಗೆ ಸದ್ಯಕ್ಕೆ ಗಡಿ ತಿಕ್ಕಾಟ ನಡೆಸುತ್ತಿರುವ ಚೀನಾ ಈಗ ಯುದ್ಧಕ್ಕೆ ತಯಾರಾಗುತ್ತಿದೆ. ಯುದ್ಧಕ್ಕೆ ತಯಾರಾಗುವಂತೆ ಚೀನಾ ಅಧ‍್ಯಕ್ಷ ಕ್ಸಿನ್ ಜಿನ್ ಪಿಂಗ್ ಪೀಪಲ್ಸ್ ಲಿಬರೇಷನ್ ಆರ್ಮಿಗೆ ಕರೆ ನೀಡಿದ್ದಾರೆ.
ಹೀಗಾಗಿ ಈಗ ಶತ್ರು ಯಾರಾಗಿರಬಹುದು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಭಾರತದೊಂದಿಗೆ ಗಡಿಯಲ್ಲಿ ಇತ್ತೀಚೆಗೆ ತೀವ್ರ ಚಕಮಕಿ ನಡೆಸುತ್ತಿರುವ ಚೀನಾ ಅಲ್ಲಿ ಸೈನಿಕರ ಜಮಾವಣೆಯನ್ನೂ ಹೆಚ್ಚಿಸುತ್ತಿದೆ. ಹೀಗಾಗಿ ಭಾರತವನ್ನೇ ಗುರಿಯಾಗಿಸಿ ನೀಡಿದ ಹೇಳಿಕೆಯೇ ಎಂದು ಈಗ ಚರ್ಚೆಯಾಗುತ್ತಿತ್ತು. ಆದರೆ ಭಾರತದ ಪ್ರತಿಯೋಜನೆಯ ಬಳಿಕ ಬೆಚ್ಚಿಬಿದ್ದ ಚೀನಾ ಈಗ ಶಾಂತಿ ಮಾತುಕತೆ ಪ್ರಸ್ತಾಪವಿಟ್ಟಿದ್ದು, ಯುದ್ಧಕ್ಕೆ ತಯಾರಾಗಲು ಹೇಳಿದ್ದು ಭಾರತದ ವಿರುದ್ಧವಲ್ಲ ಎಂದು ತೇಪೆ ಹಚ್ಚಲು ಪ್ರಯತ್ನಿಸಿದೆ.