ಉತ್ತರ ಪ್ರದೇಶದಲ್ಲಿ ತಾವು ನಡೆಸುತ್ತಿರುವ ಕಿಸಾನ್ ಯಾತ್ರಾದ ಏಳನೆಯ ದಿನ ಮಿರ್ಜಾಪುರದಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ನಾಯಕ, ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಮೋದಿ ಅವರು ಉದ್ಯಮಪತಿಗಳ 1.10 ಲಕ್ಷ ಕೋಟಿ ಸಾಲಮನ್ನಾ ಮಾಡಿದರು. ಆದರೆ ನಾವು ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೇರಿದರೆ 10 ದಿನಗಳೊಳಗೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.
ನನ್ನ ಘೋಷಣೆ, 'ಸಾಲ ಮನ್ನಾ, ವಿದ್ಯುತ್ ಬಿಲ್ ಅರ್ಧ ಮನ್ನಾ 'ಎಂದು ಅವರು ಹೇಳಿದರು.
ಜನರನ್ನು ಓಲೈಸಲು ಪ್ರಯತ್ನಿಸಿದ ಅವರು ನಾನು ಇಲ್ಲಿ ನಿಮ್ಮಿಂದ ಕಲಿಯ ಬಂದಿದ್ದೇನೆ, ಹೊರತು ಉಪನ್ಯಾಸ ನೀಡಲು ಅಲ್ಲ ಎಂದರು.