ದಿಢೀರ್ ದೇಶದ ಜನರ ಜತೆ ಮಾತನಾಡಲು ಸಮಯ ನಿಗದಿ ಮಾಡಿದ ಮೋದಿ, ಹೆಚ್ಚಿದ ಕುತೂಹಲ

Sampriya

ಭಾನುವಾರ, 21 ಸೆಪ್ಟಂಬರ್ 2025 (14:23 IST)
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಂಜೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದು, ಇದೀಗ ಭಾರೀ ಕುತೂಹಲವನ್ನು ಮೂಡಿಸಿದೆ. 

ಇದು ವರ್ಷದ ಅತ್ಯಂತ ಮಹತ್ವದ ಆರ್ಥಿಕ ನವೀಕರಣಗಳಲ್ಲಿ ಒಂದೆಂದು ಹೇಳಲಾಗುತ್ತದೆ. ಸಂಜೆ 5 ಗಂಟೆಗೆ ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿಯವರ ಭಾಷಣ ಮಾಡಲಿದ್ದಾರೆ. ಪಿಎಂ ಮೋದಿಯವರ ಭಾಷಣದ ಸಂಪೂರ್ಣ ವಿವರಗಳ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ. 

ನಾಗರಿಕರಲ್ಲಿ ಮತ್ತು ಮಾರುಕಟ್ಟೆಗಳು ಯಾವ ಘೋಷಣೆಗಳನ್ನು ಮಾಡಬಹುದೆಂಬ ಕುತೂಹಲ ಹೆಚ್ಚಾಗಿದೆ.  ಹಬ್ಬದ ಋತುವಿನಲ್ಲಿ ಪ್ರಮುಖ ಆರ್ಥಿಕ ಮತ್ತು ಸಾಮಾಜಿಕ ಕ್ರಮಗಳ ಬಗ್ಗೆ ಮೋದಿ ಏನಾದ್ರೂ ಬಿಗ್ ಅಪ್ಡೇಟ್ ನೀಡುತ್ತಾರಾ ಎಂಬ ಚರ್ಚೆ ಹುಟ್ಟುಕೊಂಡಿದೆ.

ಜಿಎಸ್‌ಟಿ ಸುಧಾರಣೆಗಳನ್ನು 'ದೀಪಾವಳಿಯ ಮೊದಲು ಸಂತೋಷದ ಡಬಲ್ ಧಮಾಕಾ' ಎಂದು ಶ್ಲಾಘಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಯುಗದ ತೆರಿಗೆಗಳನ್ನು ಟೀಕಿಸಿದರು.

ಇದಕ್ಕೂ ಮುನ್ನ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಪ್ರಧಾನಿ ಮೋದಿ ಅವರು ತಮ್ಮ ದುರ್ಗಾ ಪೂಜೆಯ ಶುಭಾಶಯಗಳನ್ನು ತಿಳಿಸಿದ್ದಾರೆ, "ನಿಮ್ಮೆಲ್ಲರಿಗೂ ಶುಭೋ ಮಹಾಲಯದ ಶುಭಾಶಯಗಳು! ಪವಿತ್ರವಾದ ನಮ್ಮವರು ದುರ್ಗಾ ಪೂಜೆಯ ಉದ್ದೇಶದಿಂದ ದೀಪ ಬೆಳಗಿಸುತ್ತಾ ದುರ್ಗಾ ಪೂಜೆಯ ಉದ್ದೇಶದಿಂದ ದುರ್ಗಾ ಮಾತೆಯ ದೈವಿಕ ಆಶೀರ್ವಾದವು ಅಚಲವಾದ ಶಕ್ತಿ, ಶಾಶ್ವತ ಸಂತೋಷ ಮತ್ತು ಅದ್ಭುತ ಆರೋಗ್ಯವನ್ನು ತರಲಿ ಎಂದರು ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ