ಲಸಿಕೆ ಪಡೆಯಲು ಮಕ್ಕಳ ಸ್ಪಂದನೆಗೆ ಮೋದಿ ಮೆಚ್ಚುಗೆ

ಗುರುವಾರ, 13 ಜನವರಿ 2022 (09:20 IST)
15ರಿಂದ 18 ವರ್ಷದೊಳಗಿನ ಮಕ್ಕಳು ವೇಗವಾಗಿ ಕೋವಿಡ್ ಲಸಿಕೆ ಪಡೆದುಕೊಳ್ಳುತ್ತಿರುವುದು ಯುವಜನತೆಯ ಜವಾಬ್ದಾರಿಯ ಪ್ರತಿಬಿಂಬ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ. 
 
ಪುದುಚೆರಿಯಲ್ಲಿ ಆಯೋಜಿಸಲಾಗಿರುವ 25ನೇ ಆವೃತ್ತಿಯ ರಾಷ್ಟ್ರೀಯ ಯುವ ಉತ್ಸವವನ್ನು ವರ್ಚುವಲ್ ಆಗಿ ಉದ್ಘಾಟಿಸಿ ಅವರು ಮಾತನಾಡಿದರು. 15ರಿಂದ 18 ವರ್ಷದ ಮಕ್ಕಳು ತಾವಾಗಿಯೇ ಮುಂದೆ ಬಂದು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ.

ಇದು ಅವರ ಜವಾಬ್ದಾರಿಯನ್ನು ತೋರಿಸುತ್ತಿದೆ. ಮಕ್ಕಳಿಗೆ ಲಸಿಕಾರಣ ಆರಂಭವಾದಾಗಿನಿಂದ ಈವರೆಗೆ 2 ಕೋಟಿಗೂ ಅಧಿಕ ಡೋಸ್ ವಿತರಿಸಲಾಗಿದೆ. ಕೋವಿಡ್ ಲಸಿಕಾರಣಕ್ಕೆ ಯುವಕರು ಹೆಚ್ಚಿನ ವೇಗ ನೀಡಿದ್ದಾರೆ.

ಇದು ಸಾಂಕ್ರಾಮಿಕವನ್ನು ಎದುರಿಸುವಲ್ಲಿ ಯುವಕರಿಗೆ ಧೈರ್ಯ ತುಂಬಿದೆ. ಜೊತೆಗೆ ಯುವಕರ ನನ್ನ ಆತ್ಮವಿಶ್ವಾಸವು ಹೆಚ್ಚಾಗಿದೆ. ಇಂದು ಭಾರತ ಏನು ಹೇಳುತ್ತದೆಯೋ ಅದು ನಾಳಿನ ವಿಶ್ವದ ದನಿಯಾಗಲಿದೆ. ಎಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ