ಮೋದಿಯವರ ಪಂಜಾಬ್ ರ್ಯಾಲಿ ದಿಢೀರ್ ರದ್ದು!

ಬುಧವಾರ, 5 ಜನವರಿ 2022 (15:01 IST)
ಚಂಡೀಗಢ : ಭದ್ರತಾ ಲೋಪಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್ನ ಫಿರೋಜ್‌ಪುರದಲ್ಲಿ ರ್ಯಾಲಿ ರದ್ದು ಮಾಡಿದ್ದಾರೆ.

“ಹುಸೇನಿವಾಲಾದಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಸುಮಾರು 30-ಕಿಮೀ ದೂರದಲ್ಲಿ, ಪ್ರಧಾನ ಮಂತ್ರಿಯ ಬೆಂಗಾವಲು ಪಡೆ ಫ್ಲೈಓವರ್ ಅನ್ನು ತಲುಪಿದಾಗ, ಕೆಲವು ಪ್ರತಿಭಟನಾಕಾರರು ರಸ್ತೆಯನ್ನು ನಿರ್ಬಂಧಿಸಿರುವುದು ಕಂಡುಬಂದಿದೆ.

ಪ್ರಧಾನಿಯವರು 15-20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಲುಕಿಕೊಂಡರು. ಇದು ಪ್ರಧಾನಿಯವರ ಭದ್ರತೆಯಲ್ಲಿ ದೊಡ್ಡ ಲೋಪವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಎರಡು ವರ್ಷಗಳ ಅಂತರದ ನಂತರ ಪ್ರಧಾನಿಯವರ ಪಂಜಾಬ್ ಭೇಟಿ ನಿಗದಿಯಾಗಿದ್ದು, ಕೃಷಿ ಕಾನೂನುಗಳನ್ನು ರದ್ದುಪಡಿಸಿದ ನಂತರ ಇದು ಮೊದಲನೆಯ ಭೇಟಿಯಾಗಿತ್ತು.

ರ್ಯಾಲಿಗೆ ಗಂಟೆಗಳ ಮೊದಲು, ಫಿರೋಜ್‌ಪುರದ ಸ್ಥಳಕ್ಕೆ ಹೋಗುವ ಮೂರು ಮಾರ್ಗಗಳನ್ನು ಕಿಸಾನ್ ಮಜ್ದೂರ್ ಸಂಗ್ರಹ್ ಸಮಿತಿ ಸದಸ್ಯರು ನಿರ್ಬಂಧಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ