ಮೂರು ತಿಂಗಳ ಹಸುಗೂಸ ಕೊಂದ ತಾಯಿ
ಮಹಿಳೆ ಗಂಡನಿಂದ ಪ್ರತ್ಯೇಕವಾಗಿದ್ದಳು. ಇದೀಗ ಇನ್ನೊಬ್ಬನೊಡನೆ ಅಕ್ರಮ ಸಂಬಂಧ ಹೊಂದಿದ್ದಳು. ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಮಹಿಳೆ ತನ್ನ ಅಕ್ರಮ ಸಂಬಂಧ ಮರೆ ಮಾಚಲು ಆ ಹಸುಗೂಸನ್ನು ಕೊಲೆ ಮಾಡಿ 13 ವರ್ಷದ ಪುತ್ರನ ಜೊತೆ ಸೇರಿಕೊಂಡು ದೇಹ ಮಣ್ಣು ಮಾಡಲೆತ್ನಿಸಿದ್ದಳು.
ಆದರೆ ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅಪ್ರಾಪ್ತ ಬಾಲಕನನ್ನು ಪ್ರಶ್ನಿಸಿದಾಗ ಆತ ನಿಜಾಂಶ ಬಾಯಿಬಿಟ್ಟಿದ್ದಾನೆ. ಇದೀಗ ಅಮ್ಮ ಮತ್ತು ಮಗನನ್ನು ಪೊಲೀಸರು ಬಂಧಿಸಿದ್ದಾರೆ.