ಮಕ್ಕಳ ಶಾಲೆ ಫೀಸ್ ತುಂಬಲು ಕಿಡ್ನಿ ಮಾರಲು ಮುಂದಾದ ತಾಯಿ

ಗುರುವಾರ, 1 ಜೂನ್ 2017 (12:22 IST)
ಆಗ್ರಾ: ಇಂದಿನ ದಿನ ವಿದ್ಯಾಭ್ಯಾಸ ಎಷ್ಟು ದುಬಾರಿ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಇಲ್ಲೊಬ್ಬ ತಾಯಿ ತನ್ನ ಮಕ್ಕಳ ವಿದ್ಯಾಭ್ಯಾಸ ಶುಲ್ಕ ಪಾವತಿಸಲು ಕಿಡ್ನಿ ಮಾರಿಕೊಳ್ಳಲು ಮುಂದಾಗಿದ್ದಾಳೆ.

 
ಉತ್ತರ ಪ್ರದೇಶದ ರೋಹ್ಟಾದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಮೂವರು ಹೆಣ್ಣು ಮಕ್ಕಳು ಮತ್ತು ಒಬ್ಬ ಪುತ್ರನನ್ನು ಹೊಂದಿರುವ ಆರತಿ ಶರ್ಮಾ ಎಂಬಾಕೆ ತನ್ನ ಮಕ್ಕಳ ವಿದ್ಯಾಭ್ಯಾಸದ ಶುಲ್ಕ ಪಾವತಿಸಲು ದುಡ್ಡಿಲ್ಲದೇ ಪರದಾಡುತ್ತಿದ್ದಳು.

ಸಿಬಿಎಸ್ಇ ಶಾಲೆಗೆ ಹೋಗುತ್ತಿದ್ದ ಮಕ್ಕಳನ್ನು ಶುಲ್ಕ ಪಾವತಿಸದ ಕಾರಣಕ್ಕೆ ಶಾಲೆಯಿಂದ ಹೊರ ಹಾಕಲಾಗಿತ್ತು. ಇದೀಗ ಅವರು ಮತ್ತೆ ಶಾಲೆಗೆ ಸೇರಬೇಕೆಂದರೆ ಹಣ ಪಾವತಿಸಬೇಕಿತ್ತು. ಬಟ್ಟೆ ವ್ಯಾಪಾರಿಯಾಗಿದ್ದ ಗಂಡ ನೋಟು ನಿಷೇಧವಾದ ಕಾರಣ ನಷ್ಟ ಅನುಭವಿಸಿದ್ದ.

ಬೇರೆ ದಾರಿ ಕಾಣದ ಆಕೆ ಇದೀಗ ಕೆಲವು ಸಾಮಾಜಿಕ ಸಂಘಟನೆಗಳ ನೆರವಿನಿಂದ ಕಿಡ್ನಿ ಮಾರುವುದಾಗಿ ಜಾಹೀರಾತು ನೀಡಿದ್ದಾಳೆ. ವಿಪರ್ಯಾಸವೆಂದರೆ ಆರತಿ ಸಿಎಂ ಯೋಗಿ ಆದಿತ್ಯನಾಥ್ ರನ್ನೂ ಭೇಟಿಯಾಗಿ ಸಹಾಯ ಕೇಳಿದ್ದಳು. ಆದರೆ ಪ್ರಯೋಜನವಾಗಿರಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ