ಹಲಗೆಯಿಂದ ತಾಯಿಯನ್ನೇ ಹತ್ಯೆಗೈದ!

ಶನಿವಾರ, 28 ಮೇ 2022 (12:51 IST)
ಭುವನೇಶ್ವರ್ : ವ್ಯಕ್ತಿಯೊಬ್ಬ ತನ್ನ ತಾಯಿಯನ್ನೇ ಮರದ ಹಲಗೆಯಿಂದ ಹತ್ಯೆಗೈದ ಅಮಾನವೀಯ ಘಟನೆ ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ನಡೆದಿದೆ.

ಜಿತೇಂದ್ರ ಕನ್ಹರ್(30) ಬಂಧಿತ ಆರೋಪಿ. ಒಡಿಶಾದ ಕಂಧಮಾಲ್ ಜಿಲ್ಲೆಯ ಫುಲ್ಬಾನಿ ಪಟ್ಟಣದ ಹೊರವಲಯದಲ್ಲಿ ಈ ದುರ್ಘಟನೆ ನಡೆದಿದೆ. ಈತ 61 ವರ್ಷದ ತಾಯಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ.

ಫುಲ್ಬಾನಿ ಪಟ್ಟಣದ ಹೊರವಲಯದಲ್ಲಿರುವ ತಮ್ಮ ಮನೆಯಲ್ಲಿ ಬೆಳಗ್ಗೆ ಜಗಳವಾಡಿದ ನಂತರ ಕೋಪ ಗೊಂಡಿದ್ದ. ಈ ಕೋಪ ಮಿತಿಮೀರಿದ್ದು, ತಾಯಿಯನ್ನು ಜಿತೇಂದ್ರ ಮರದ ಹಲಗೆಯಿಂದ ಹೊಡೆದಿದ್ದಾನೆ.

ಸ್ಥಳೀಯರು ಆಕೆಯನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದರು. ಮೃತಪಟ್ಟ ವಿಷಯವನ್ನು ವೈದ್ಯರು ಸ್ಪಷ್ಟಪಡಿಸಿದ್ದಾರೆ ಎಂದು ಫುಲ್ಬಾನಿ ಉಪವಿಭಾಗದ ಪೊಲೀಸ್ ಅಧಿಕಾರಿ ಮಹೇಂದ್ರ ಮುರ್ಮು ತಿಳಿಸಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ