ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ: ಮಾಜಿ ಸಚಿವ ಆತ್ಮಹತ್ಯೆ

ಶನಿವಾರ, 28 ಮೇ 2022 (09:40 IST)
ಉತ್ತರಾಖಂಡ: ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪ ಹಿನ್ನಲೆಯಲ್ಲಿ ಮುಜುಗರಕ್ಕೀಡಾದ ಮಾಜಿ ಸಚಿವ ರಾಜೇಂದ್ರ ಬಹುಗುಣ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿದ್ದಾರೆ.

ತನ್ನ ಮಗಳ ಮೇಲೆ ಮಾವ ರಾಜೇಂದ್ರ ಬಹುಗುಣ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಸೊಸೆ ಆರೋಪಿಸಿದ್ದಳು. ಈ ಸಂಬಂಧ ಮಾಜಿ ಸಚಿವರ ವಿರುದ್ಧ ಎಫ್ ಐಆರ್ ಕೂಡಾ ದಾಖಲಾಗಿತ್ತು.

ಆದರೆ ಸೊಸೆ ಮಾಡಿದ ಆರೋಪದಿಂದ ತೀವ್ರ ಬೇಸರಗೊಂಡಿದ್ದ ರಾಜೇಂದ್ರ ಬಹುಗುಣ ಪೊಲೀಸರು ನಿವಾಸಕ್ಕೆ ಆಗಮಿಸುವ ವೇಳೆ ನಾನು ತಪ್ಪು ಮಾಡಿಲ್ಲ ಎಂದು ಕೂಗಿ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ